ಬೆಳ್ತಂಗಡಿ :ಕೋಯಾ ಫ್ರೆಂಡ್ಸ್ ಕ್ಲಬ್ ಮದ್ದಡ್ಕ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿರುವ ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವು ಜೂ.30 ರಂದು ನಡೆಯಿತು.
ಮದ್ದಡ್ಕ – ಓಡಿಲ್ನಾಳ ವಲಯದ ಒಟ್ಟು 25 ಬಡಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಧನಸಹಾಯ: ಕಿಟ್ ಮಾತ್ರವಲ್ಲದೇ ಆರೋಗ್ಯ ಸಮಸ್ಯೆಯಿಂದ ಕಳೆದ ಒಂದು ತಿಂಗಳಿನಿಂದ ಮಲಗಿದ್ದಲ್ಲೇ ಇರುವ ಸುರೇಶ್ ಪೂಜಾರಿ ಮೆರಲ್ಕೆ ಇವರ ಚಿಕಿತ್ಸೆಗಾಗಿ 20000 ರೂ. ಧನಸಹಾಯವನ್ನೂ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ ಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ್ ಶೆಟ್ಟಿ, ಸದಸ್ಯೆ ಭಾರತೀ ಶೆಟ್ಟಿ ಮುಂಗೇಲು, ಶಾಂತಾ ಬಂಗೇರ, ಪ್ರದೀಪ್ ನಾಯಕ್ ಬಲ್ಕತ್ಯಾರು, ಕವನ್ ರಾಜ್, ಅರುಣ್ ಸುಮಿತ್ ಡಿಸೋಜ, ರಂಜಿತ್ ಪೂಜಾರಿ, ಪ್ರಜ್ವಲ್ ಪೂಜಾರಿ ಬಡೆಕ್ಕಿನ, ರಮೇಶ್ ಪಲ್ಕೆ,ಅಶೋಕ್ ಶೆಟ್ಟಿ ಉಪ್ಪಡ್ಕ, ರಂಜಿತ್ ಕೊಲ್ಯ, ಅಭಿಷೇಕ್ ಕೊಲ್ಯ, ಸುದೇಶ್ ಪಾದೆ, ಅವಿನಾಶ್ ಪಲ್ಕೆ, ಶಶಿಧರ್ ಪೊಡುಂಬ, ಕೀರ್ತನ್ ಶೆಟ್ಟಿ ಮೂಡಾಯಿಲು, ಮಾರಪ್ಪ, ಶಾಶ್ವಿತ್, ನಿತೇಶ್ ಕೊಲ್ಯ, ರಾಜೇಶ್ ಕೊಲ್ಯ, ದಿಲೀಪ್ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.