ಪುತ್ತೂರು: ಡಿಸೆಂಬರ್ ತಿಂಗಳಿನಲ್ಲಿ ಪುತ್ತೂರಿನಲ್ಲಿ
ನಡೆಯುವ ಗಿರಿಜಾ ಕಲ್ಯಾಣೋತ್ಸವವು ಧಾರ್ಮಿಕ – ಕಾರ್ಯಕ್ರಮವಾಗಿದ್ದು ತಾವು ಬರಬೇಕೆಂದು ಸಂಘಟಕರು ವಿನಂತಿಸಿದ ಮೇರೆಗೆ ನಾನು ಪೂರ್ವಭಾವಿಸಭೆಗೆ ಹಾಜರಾಗಿದ್ದೆ.
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಹಲವರು ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ ಅವರು ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಕ್ತನಾಗಿ ನಾನು ಹೋಗತ್ತೇನೆ. ಗಿರಿಜಾ ಕಲ್ಯಾಣಕ್ಕೂ ಹೋಗುತ್ತೇನೆ ಎಂದು ಡಾ. ರಘು ಬೆಳ್ಳಿಪ್ಪಾಡಿ ಯವರು ತಿಳಿಸಿದ್ದಾರೆ.
ಪುತ್ತಿಲ ಪರಿವಾರ ಸಂಘಟನೆಯ ಯಾವುದೇ ಸಭೆಗಳಲ್ಲಿ ನಾನು ಈ ಹಿಂದೆಯೂ ಭಾಗಿಯಾಗಿಲ್ಲ ಮುಂದೆಯೂ ಭಾಗಿಯಾಗಲ್ಲ ಕೇವಲ ಗಿರಿಜಾ ಕಲ್ಯಾಣ ಧಾರ್ಮಿಕ ಕಾರ್ಯಕ್ರಮದ ಹಿನ್ನಲೆ ಭಾಗಿಯಾಗಿದ್ದೇನೆ ಎಂದು ಗೌರವಾಧ್ಯಕ್ಷರಾಗಿ ಆಯ್ಕೆಯಾದ ಡಾ. ರಘು ಬೆಳ್ಳಿಪ್ಪಾಡಿ ಯವರು ತಿಳಿಸಿದ್ದಾರೆ.



























