ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ನಡೆಯಲಿರುವ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ–2026 ಹಾಗೂ ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆ.28ರಂದು ಶಾಸಕ ಹರೀಶ್ ಪೂಂಜ ಅವರ ನಿವಾಸ ‘ಮಿಥಿಲಾ’ದಲ್ಲಿ ನಡೆಯಿತು.
ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಜವಾಬ್ದಾರಿ ಹಂಚಿಕೆ, ಆಯೋಜನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಗಳಾದ ವಿನೀತ್ ಕೋಟ್ಯಾನ್ ಸಾವ್ಯ, ಜಯಪ್ರಸಾದ್ ಗೌಡ ಕಡಮ್ಮಾಜೆ ಫಾರ್ಮ್ಸ್ ಮೊಗ್ರು, ಉಪಾಧ್ಯಕ್ಷರಾದ ಗಣೇಶ್ ಲಾಯಿಲ, ಪ್ರಕಾಶ್ ಪೂಜಾರಿ ಮುಜ್ಜಾಳೆ, ಸುಜಿತ್ ಪೆರಾಡಿ, ಹರೀಶ್ ಗೌಡ ಸಂಬೊಲ್ಯ, ಕಾರ್ಯದರ್ಶಿಗಳಾದ ಸುಧೀರ್ ಪೂಜಾರಿ ಚಾರ್ಮಾಡಿ, ಗಿರೀಶ್ ಗೌಡ ಬಿ.ಕೆ. ಬಂದಾರು, ಜಗದೀಶ್ ಹೆಗ್ಡೆ ಕನ್ನಾಜೆ, ಕೋಶಾಧಿಕಾರಿ ಸ್ವಸ್ತಿಕ್ ಗೌಡ ಹಟತ್ತೋಡಿ ಕುಕ್ಕಳ ಸೇರಿದಂತೆ ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅವಿನಾಶ್ ಹೊಸಂಗಡಿ, ಅಶ್ವಿನ್ ಅಂಡಿಂಜೆ, ಪ್ರಸಾದ್ ಸುದೇಮುಗೇರು, ಮನೀಷ್ ಡಿ.ಎ. ಧರ್ಮಸ್ಥಳ, ಜಯಕುಮಾರ್ ಶಿರ್ಲಾಲು ಹಾಗೂ ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕ ಲೋಕ್ಷತ್ ಗೌಡ ಅನಿಲ ಬಂದಾರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.



























