ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತಪಟ್ಟಿರುವ ಘಟನೆ ನಗರದ ಮಂಗಳಾದೇವಿ ಸಮೀಪ ನಡೆದಿದೆ. ಕೊಲ್ಯ ಕಣೀರುತೋಟ ನಿವಾಸಿ ಆಕಾಶ್(34) ಮೃತ ದುರ್ದೈವಿ.
ಮಂಗಳಾದೇವಿ ಸಮೀಪ ಕಟ್ಟಡಕ್ಕೆ ಬಣ್ಣ ಬಳಿಯುತ್ತಿದ್ದ ವೇಳೆ ಘಟನೆ ನಡೆದಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಅಂತಸ್ತಿನಿಂದ ಕೆಲಕ್ಕೆ ಬಿದ್ದ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.