Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

    ಪಾಲದಿಂದ ಜಾರಿ ಬಿದ್ದು ವೃದ್ಧ ಮೃತ್ಯು..!!

    ಪುತ್ತೂರು: ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!

    ಪುತ್ತೂರು: ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!

    ದಕ್ಷಿಣ ಕನ್ನಡದಲ್ಲಿ ಸರಣಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಬಂಧನ..!!

    ದಕ್ಷಿಣ ಕನ್ನಡದಲ್ಲಿ ಸರಣಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಬಂಧನ..!!

    ಪಣಕಜೆ ಸಮೀಪ ಕಾರು ಪಲ್ಟಿ: ಮೂವರು ಅಪಾಯದಿಂದ ಪಾರು..!!

    ಪಣಕಜೆ ಸಮೀಪ ಕಾರು ಪಲ್ಟಿ: ಮೂವರು ಅಪಾಯದಿಂದ ಪಾರು..!!

    ಗೃಹ ಜ್ಯೋತಿಯ ಬಗ್ಗೆ ಗೊಂದಲ ಬೇಡ ಅಗತ್ಯ ದಾಖಲೆ ಒದಗಿಸಿದರೆ ಸಾಕು : ಜಯಂತಿ ವಿ.ಪೂಜಾರಿ..!!

    ಗೃಹ ಜ್ಯೋತಿಯ ಬಗ್ಗೆ ಗೊಂದಲ ಬೇಡ ಅಗತ್ಯ ದಾಖಲೆ ಒದಗಿಸಿದರೆ ಸಾಕು : ಜಯಂತಿ ವಿ.ಪೂಜಾರಿ..!!

    ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ; ಚಾಲಕ, ಅಪರೇಟರ್ ಅಪಾಯದಿಂದ ಪಾರು..!!

    ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ; ಚಾಲಕ, ಅಪರೇಟರ್ ಅಪಾಯದಿಂದ ಪಾರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಆತೂರು : ಶೆಡ್ ಧ್ವಂಸಗೊಳಿಸಿದ್ದ ಜಾಗದಲ್ಲಿಯೇ ಮತ್ತೆ ತಲೆಯೆತ್ತಲಿದೆ ಸುಸಜ್ಜಿತ ಪೊಲೀಸ್ ಚೆಕ್ ಪೋಸ್ಟ್:; ಹೆದ್ದಾರಿ ಬದಿಯ ಬೇಲಿ ತೆರವುಗೊಳಿಸಿದ ಲೋಕೋಪಯೋಗಿ ಇಲಾಖೆ

July 3, 2021
in ಮಂಗಳೂರು
0
ಆತೂರು : ಶೆಡ್ ಧ್ವಂಸಗೊಳಿಸಿದ್ದ  ಜಾಗದಲ್ಲಿಯೇ ಮತ್ತೆ ತಲೆಯೆತ್ತಲಿದೆ ಸುಸಜ್ಜಿತ ಪೊಲೀಸ್ ಚೆಕ್ ಪೋಸ್ಟ್:; ಹೆದ್ದಾರಿ ಬದಿಯ ಬೇಲಿ ತೆರವುಗೊಳಿಸಿದ ಲೋಕೋಪಯೋಗಿ ಇಲಾಖೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಮೂರು ದಿನದ ಹಿಂದೆ ಧ್ವಂಸಗೊಂಡಿದ್ದ ಪೊಲೀಸ್ ತಾತ್ಕಾಲಿಕ ಶೆಡ್‌ಗೆ ಹೊಂದಿಕೊಂಡು ಖಾಸಗಿ ವ್ಯಕ್ತಿಯೋರ್ವರು ಹಾಕಿದ್ದ ಬೇಲಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಲೋಕೋಪಯೋಗಿ ಇಲಾಖೆಯಿಂದ
ಜು.2 ರಂದು ತೆರವುಗೊಳಿಸಲಾಗಿದೆ.

Advertisement
Advertisement

ಜೂ.29ರಂದು ಆತೂರು ಚೆಕ್ ಪಾಯಿಂಟ್‌ನಲ್ಲಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದ ಕಡಬ ಎಸ್.ಐ. ರುಕ್ಮ ನಾಯ್ಕ್ ರವರಿಗೆ ದಾಖಲೆ ತೋರಿಸಿ ರಸ್ತೆ ದಾಟುತ್ತಿದ್ದ ಆತೂರುಬೈಲು ನಿವಾಸಿ ಹಾರೀಸ್ (35ವ.)ಎಂಬವರಿಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಅವರು ಮೃತಪಟ್ಟಿದ್ದರು.

ಈ ಘಟನೆಯ ನಂತರದ ಬೆಳವಣಿಗೆಯಲ್ಲಿ ಆಕ್ರೋಶಿತ ಯುವಕರ ಗುಂಪೊಂದು ಚೆಕ್ ಪಾಯಿಂಟ್ ಬಳಿ ಪೊಲೀಸರಿಗೆ ತಂಗಲು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೆಡ್ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಎರಡು ದಿನದ ನಂತರ ಧ್ವಂಸಗೊಂಡ ಜಾಗದಲ್ಲೇ ಸುಸಜ್ಜಿತ ಹಾಗೂ ಶಾಶ್ವತ ಶೆಡ್ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು ಅಡಿಪಾಯ ಸಹ ಹಾಕಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಈ ಹಿಂದೆ ಇದ್ದ ಪೊಲೀಸ್
ಶೆಡ್‌ಗೆ ಹೊಂದಿಕೊಂಡು ಪಕ್ಕದ ಜಮೀನಿನ ವ್ಯಕ್ತಿಯೋರ್ವರು ಹೆದ್ದಾರಿ ಬದಿ ಸುಮಾರು 100 ಮೀ.ನಷ್ಟು ಉದ್ದಕ್ಕೆ ಹಾಕಿದ್ದ ತಂತಿ ಬೇಲಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

Advertisement

ಇದಕ್ಕೂ ಮೊದಲು ಕಡಬ ತಹಶೀಲ್ದಾರ್ ಅನಂತಶಂಕರ್‌ ರವರ ನೇತೃತ್ವದಲ್ಲಿ ಜಾಗದ ಸರ್ವೆ ನಡೆಸಲಾಯಿತು. ಈ ವೇಳೆ ರಸ್ತೆ ಮಾರ್ಜಿನ್ ಅತಿಕ್ರಮಿಸಿಕೊಂಡು ಬೇಲಿ ಹಾಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜೆಸಿಬಿ ತರಿಸಿ ಬೇಲಿ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಕಡಬ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಗಿರಿ ಗೌಡ ಹಾಗೂ ಸಿಬ್ಬಂದಿಗಳು ಸರ್ವೆ ಕಾರ್ಯ ನಡೆಸಿದರು. ಕಡಬ ತಹಶೀಲ್ದಾರ್ ಅನಂತಶಂಕರ್, ಕಂದಾಯ ಇಲಾಖೆಯ ಶೇಷಾದ್ರಿ, ಹರೀಶ್ ರವರು ಸಹಕರಿಸಿದರು. ಬಳಿಕ ಲೋಕೋಪಯೋಗಿ ಇಲಾಖೆಯ ಎಇಇ
ರಾಜಾರಾಂ ಹಾಗೂ ಜೆಇ ಕಾನಿಷ್ಕರವರ ಮಾರ್ಗದರ್ಶನದಲ್ಲಿ ಬೇಲಿ ತೆರವು ಕಾರ್ಯ ಮಾಡಲಾಯಿತು. ಕಡಬ ಎಸ್‌ಐ ರುಕ್ಮ ನಾಯ್ಕ್ , ಎಎಸ್‌ಐ ಚಂದ್ರಶೇಖರ ಗೌಡ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಸುಸಜ್ಜಿತ ಶೆಡ್ ಗೆ ಅಡಿಪಾಯ :

ಜೂ.29ರಂದು ಧ್ವಂಸಗೊಂಡಿದ್ದ ತಾತ್ಕಾಲಿಕ ಶೆಡ್ ಇದ್ದ ಜಾಗದಲ್ಲಿಯೇ ಸುಸಜ್ಜಿತಪೊಲೀಸ್‌ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದುಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಸಹ ತೆಗೆಯಲಾಗಿದೆ. ಇದಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ರಸ್ತೆ ಮಾರ್ಜಿನ್‌ನಲ್ಲಿರುವ ಬೇಲಿ ತೆರವುಗೊಳಿಸುವಂತೆ ಕೋರಿ ಪೊಲೀಸ್ ಇಲಾಖೆಯಿಂದ ಕಂದಾಯ ಹಾಗೂ ಲೋಕೋಪಯೋಗಿಇಲಾಖೆಗೆ ಮನವಿ ಮಾಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಾಗದ ಸರ್ವೆ ಮಾಡಿ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹೆದ್ದಾರಿ ಬದಿಯ ತನಕ ಖಾಸಗಿಯವರು ಬೇಲಿ ನಿರ್ಮಿಸಿ ಜಾಗ ಅತಿಕ್ರಮಣಮಾಡಿರುವುದು ಸರ್ವೆ ನಡೆಸಿದ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬೇಲಿತೆರವು ಮಾಡಿದ್ದೇವೆ. ಮತ್ತೆ ಬೇಲಿ ಹಾಕಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಲೋಕೋಪಯೋಗ ಇಲಾಖೆಯ ರಾಜಾರಾಂ ಎಇಇ ತಿಳಿಸಿದ್ದಾರೆ.

Previous Post

ಜಿ.ಪಂ. ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ದೇವರಾಜ್ ನಿಧನ

Next Post

ಪುತ್ತೂರಿನಲ್ಲೂ ಹನಿಟ್ರ್ಯಾಪ್ ಜಾಲ..! ಯುವಕನಿಗೆ ವಿಡಿಯೋ ಕಾಲ್ ಮಾಡಿ ಬಲೆ ಬೀಸಿದ ತಂಡ

OtherNews

ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು : ದ.ಕ.ಜಿಲ್ಲೆಯ ಪ್ರಮುಖ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಚಿವಾಲಯ ಕಾರ್ಯದರ್ಶಿ ಭೇಟಿಯಾದ ದ.ಕ. ಸಂಸದ ಕ್ಯಾ.ಚೌಟ.!
ಮಂಗಳೂರು

ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು : ದ.ಕ.ಜಿಲ್ಲೆಯ ಪ್ರಮುಖ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಚಿವಾಲಯ ಕಾರ್ಯದರ್ಶಿ ಭೇಟಿಯಾದ ದ.ಕ. ಸಂಸದ ಕ್ಯಾ.ಚೌಟ.!

July 7, 2026
ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ
ಕ್ರೈಮ್

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ

July 7, 2026
ಕೆಲಸಕ್ಕೆ ತೆರಳಿದ್ದ ಯುವತಿ ನಾಪತ್ತೆ..!!
ಕ್ರೈಮ್

ಕೆಲಸಕ್ಕೆ ತೆರಳಿದ್ದ ಯುವತಿ ನಾಪತ್ತೆ..!!

July 6, 2026
ಕೆಲಸಕ್ಕೆ ತೆರಳಿದ್ದ ಮಹಿಳೆ ನಾಪತ್ತೆ..!!!
ಕ್ರೈಮ್

ಕೆಲಸಕ್ಕೆ ತೆರಳಿದ್ದ ಮಹಿಳೆ ನಾಪತ್ತೆ..!!!

July 5, 2026
ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ದರೋಡೆ ಪ್ರಕರಣ: ಕೃತ್ಯಕ್ಕೆ ಸಹಕರಿಸಿದವರೂ ಸೇರಿ ಮೂವರು ಆರೋಪಿಗಳ ಬಂಧನ..!!
ಕ್ರೈಮ್

ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ದರೋಡೆ ಪ್ರಕರಣ: ಕೃತ್ಯಕ್ಕೆ ಸಹಕರಿಸಿದವರೂ ಸೇರಿ ಮೂವರು ಆರೋಪಿಗಳ ಬಂಧನ..!!

July 4, 2026
ಭೀಕರ ರಸ್ತೆ ಅಪಘಾತ: ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು..!!
Featured

ಭೀಕರ ರಸ್ತೆ ಅಪಘಾತ: ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು..!!

July 3, 2026

Leave a Reply Cancel reply

Your email address will not be published. Required fields are marked *

Recent News

ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

ಪಾಲದಿಂದ ಜಾರಿ ಬಿದ್ದು ವೃದ್ಧ ಮೃತ್ಯು..!!

July 9, 2026
ಪುತ್ತೂರು: ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!

ಪುತ್ತೂರು: ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!

July 9, 2026
ದಕ್ಷಿಣ ಕನ್ನಡದಲ್ಲಿ ಸರಣಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಬಂಧನ..!!

ದಕ್ಷಿಣ ಕನ್ನಡದಲ್ಲಿ ಸರಣಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಬಂಧನ..!!

July 9, 2026
ಪಣಕಜೆ ಸಮೀಪ ಕಾರು ಪಲ್ಟಿ: ಮೂವರು ಅಪಾಯದಿಂದ ಪಾರು..!!

ಪಣಕಜೆ ಸಮೀಪ ಕಾರು ಪಲ್ಟಿ: ಮೂವರು ಅಪಾಯದಿಂದ ಪಾರು..!!

July 9, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.