ಪುತ್ತೂರು : ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಪುತ್ತೂರು ತಾಲೂಕಿನಾದ್ಯಂತ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಮತ್ತು ಸಹಭೋಜನ ಕಾರ್ಯಕ್ರಮವೂ ಜು.3 ರಂದು ನಡೆಯಿತು.
ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ರಾಜೇಶ್ ಪಂಚೋಡಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಡಿದ ಸೇವಾ ಕಾರ್ಯದ ಬಗ್ಗೆ ವರದಿ ಸಲ್ಲಿಸಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಕೃತಜ್ಞತಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಾಲೂಕಿನಾದ್ಯಂತ ದಿನದ ಇಪ್ಪತ್ನಾಲ್ಕು ಗಂಟೆಯೂ ರಾತ್ರಿ ಹಗಲು ಎನ್ನದೆ ತನ್ನ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ ತಿಂಗಳು ಗಟ್ಟಲೆ ಮನೆ ಕುಟುಂಬ ಬಿಟ್ಟು ಸೇವಾಭಾರತಿ ಜೊತೆ ಸೇರಿಕೊಂಡು ಕೆಲಸಮಾಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದರು.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲಾಕ್ಡೌನ್ ಸಂದರ್ಭ ಸೇವಾಭಾರತಿ ಜೊತೆ ಸೇರಿಕೊಂಡು 18 ಕೊರೊನಾ ಸೋಂಕಿತ ವ್ಯಕ್ತಿಗಳ ಶವಸಂಸ್ಕಾರವನ್ನು ಸಂಪ್ರದಾಯದಂತೆ ನೆರವೇರಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಂದೂ ಜಾಗರಣ ವೇದಿಕೆ ಆಂಬುಲೆನ್ಸ್,ಸೇವಾ ರಥ ಆಂಬುಲೆನ್ಸ್,ಸಂಜೀವಿನಿ ಆಂಬುಲೆನ್ಸ್ ಹಾಗೂ ಎರಡು ತುರ್ತು ವಾಹನಗಳಲ್ಲಿ ಒಟ್ಟು 250 ಟ್ರಿಪ್ ನಲ್ಲಿ 550 ಕ್ಕೂ ಅಧಿಕ ಕೊರೊನಾ ಸೋಂಕಿತರನ್ನು ಸಾಗಾಟ ಮಾಡಿದ್ದಾರೆ. ಹಿಂದೂ ಜಾಗರಣ ವೇದಿಕೆ ರಕ್ತ ಸಹಾಯವಾಣಿ ವತಿಯಿಂದ ಈಗಾಗಲೇ 896 ಯುನಿಟ್ ರಕ್ತ ದಾನ ಮಾಡಲಾಗಿದೆ. ಅಶಕ್ತ ಕುಟುಂಬಗಳಿಗೆ 90 ಅಗತ್ಯ ಆಹಾರದ ಕಿಟ್ ವಿತರಣೆ ಮಾಡಲಾಗಿದೆ.142 ಮನೆಗಳಿಗೆ ಅಗತ್ಯ ಔಷಧಿಗಳನ್ನು ಬೇರೆ ಬೇರೆ ಕಡೆಗಳಿಂದ ಮುಟ್ಟಿಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯು ಈ ಮೂಲಕ ಸೇವಾ ಕಾರ್ಯವನ್ನು ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ಸಚಿನ್ ಪಾಪೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆ ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ ಸ್ವಾಗತಿಸಿ, ಈಶ್ವರಮಂಗಲ ಘಟಕದ ಸಂಪರ್ಕ ಪ್ರಮುಖ್ ಪ್ರವಿಶ್ ಬಂಟುಕಲ್ಲು ವಂದಿಸಿದರು.