ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿ ಸರಣಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಇಲ್ಲಿನ ಮೂರು ಮನೆಗಳಿಗೆ ಕಳ್ಳರು ನುಗ್ಗಿದ ಘಟನೆ ಜು.6 ರ ರಾತ್ರಿ ನಡೆದಿದೆ.
ಇದೆ ರಾತ್ರಿ ಅರಿಕ್ಕಿಲ ಮತ್ತು ಮಾಡಾವುನಲ್ಲೂ ಕಳ್ಳತನ ನಡೆದ ಬಗ್ಗೆ ತಿಳಿದು ಬಂದಿದ್ದು. ಸಾವಿರಾರು ರೂಪಾಯಿ ನಗದು ದೋಚಿದ್ದಾರೆ ಎನ್ನಲಾಗಿದ್ದು ಮುಂಜಾವಿನ ವೇಳೆಗೆ ಸಂಪ್ಯ ಠಾಣಾ ಎಸ್.ಐ ಉದಯರವಿಯವರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.