ಸವಣೂರು : ಬೆಳ್ಳಾರೆಗೆ ಬ್ಯೂಟಿಪಾರ್ಲರ್‌ಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದ ಐವರ್ನಾಡಿನ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಾಪತ್ತೆಯಾದ ಯುವತಿಯು ಐವರ್ನಾಡು ಗ್ರಾಮದ ಕೊಯಿಲ ನಿವಾಸಿ ಶ್ರೀಕಲಾ ಆಗಿದ್ದು ಈಕೆ ತನ್ನ ಮನೆಯಲ್ಲಿ ಬೆಳ್ಳಾರೆಯ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋಗಿದ್ದು ವಾಪಾಸು ಮನೆಗೆ ಬಂದಿಲ್ಲ ಎಂದು ಆಕೆಯ ತಂದೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.