ಕಾಸರಗೋಡು : ಕೇರಳದಲ್ಲಿ ಲಾಕ್ ಡೌನ್ ನಿರ್ಬಂಧ ಮತ್ತಷ್ಟು ಕಠಿಣ ಗೊಳಿಸಲು ಮಂಗಳವಾರ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಕೊರೋನಾ ಅವಲೋಕನ ಸಭೆಯಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದರಂತೆ15 ಶೇಕಡಾಕ್ಕಿಂತ ಅಧಿಕ ಟೆಸ್ಟ್ ಪಾಸಿಟಿವ್ ರೇಟ್ ಇರುವ ಸ್ಥಳಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುವುದು . ಶೇಕಡಾ ಐದಕ್ಕಿಂತ ಕಡಿಮೆ ಟಿ ಪಿ ಆರ್ ಹೊಂದಿರುವ ಸ್ಥಳಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುವುದು . ಈ ಪ್ರದೇಶಗಳನ್ನು ‘ಎ ‘ ಎಂದು ಗುರುತಿಸಲಾಗಿದೆ.
ಐದರಿಂದ ಹತ್ತು ಶೇಕಡಾ ತನಕದ ಪ್ರದೇಶವನ್ನು ‘ಬಿ ‘ ಎಂದು ಗುರುತಿಸಿದ್ದು , ಈ ಪ್ರದೇಶಗಳಲ್ಲಿ ನಿಯಂತ್ರಣ ಗಳೊಂದಿಗೆ ಕೆಲ ಸಡಿಲಿಕೆಗೆ ಅನುಮತಿ ನೀಡಲಾಗುವುದು . 10 ರಿಂದ 15 ಶೇಕಡಾ ದಷ್ಟು ಟಿ. ಪಿ . ಆರ್ ಹೊಂದಿರುವ ಪ್ರದೇಶಗಳನ್ನು ‘ಸಿ ‘ ಎಂದು ವಿಂಗಡಿಸಲಾಗಿದ್ದು ,ಕಟ್ಟು ನಿಟ್ಟಿನ ನಿರ್ಬಂಧ ಜಾರಿಯಲ್ಲಿರಲಿದೆ . ಆದರೆ 15 ಶೇ ಶೇಕಡಾ ಕ್ಕಿಂತ ಅಧಿಕ ಟಿ .ಪಿ ಆರ್ ಹೊಂದಿದ ಪ್ರದೇಶಗಳನ್ನು ತ್ರಿಬಲ್ ಲಾಕ್ ಡೌನ್ ( ಸಂಪೂರ್ಣ ಲಾಕ್ ಡೌನ್ ) ಜಾರಿಗೆ ತರಲಾಗುವುದು . ಆಯಾ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ಟೆಸ್ಟ್ ಪಾಸಿಟಿವ್ ರೇಟ್ ನಂತೆ ನಿರ್ಬಂಧ ಜಾರಿಗೆ ಬರಲಿದೆ. ಇಂದಿನಿಂದ ( ಬುಧವಾರ ) ದಿಂದ ಈ ನಿಯಂತ್ರಣ ಜಾರಿಗೆ ಬರಲಿದೆ .
ಎ ಮತ್ತು ಬಿ ವಿಭಾಗದ ಪ್ರದೇಶಗಳ ಸರಕಾರಿ ಕಚೇರಿಗಳಲ್ಲಿ ಎಲ್ಲಾ ನೌಕರರು , ‘ಸಿ ‘ ಗುಂಪಿನಲ್ಲಿ ಶೇಕಡಾ 50 ರಷ್ಟು ನೌಕರರು ಕೆಲಸಕ್ಕೆ ಹಾಜರಾಗಬಹುದು .