ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಶರತ್ ಮಡಿವಾಳ ರವರ ಬಲಿದಾನದ ಗೌರವಾರ್ಥವಾಗಿ ಸಂಘ ಪರಿವಾರದ ಸ್ವಯಂಸೇವಕರು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು..

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯದ ವತಿಯಿಂದ ಶರತ್ ಮಡಿವಾಳ ರವರ ಸವಿನೆನಪಿಗಾಗಿ ಸಾವಿರ ಗಿಡಗಳನ್ನು ನೆಡುವ ಅಭಿಯಾನಕ್ಕೆ ಸಜೀಪಮೂಡ ಅನ್ನಪ್ಪಾಡಿ ಸದಾಶಿವ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಮನೆಗೊಂದು ಸಸಿ ಎಂಬ ಸಂಕಲ್ಪಯೊಂದಿಗೆ ಮನೆ ಮಂದಿರ ದೇಗುಲಗಳ ವಠಾರದಲ್ಲಿ ಗಿಡಗಳನ್ನು ನೆಟ್ಟು ಸ್ವಯಂಸೇವಕ ಶರತ್ ಮಡಿವಾಳರಿಗೆ ಗೌರವ ಸಲ್ಲಿಸಿದರು.

