ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ರೀಯಾ ಪ್ಲಾನೇಟ್ ನ ಪ್ರಥಮ ಮಹಡಿಯಲ್ಲಿ ನೂತನ “ವಿಟ್ಲ ಮಾಧ್ಯಮ ಮತ್ತು ಮಾಹಿತಿ ಕೇಂದ್ರ” ಕಚೇರಿ ಜು.12 ರಂದು ಶುಭಾರಂಭಗೊಳ್ಳಲಿದೆ.
ಗಣ್ಯರ ಸಮ್ಮುಖದಲ್ಲಿ ನೂತನ ಕಚೇರಿಗೆ ಚಾಲನೆ ನೀಡಲಾಗುತ್ತದೆ. ಇಲ್ಲಿ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಾಹಿತಿ ಮತ್ತು ಸೇವೆ, ಆನ್ ಲೈನ್ ಸೇವೆ, ಸಮಾರಂಭಗಳ ಆಮಂತ್ರಣ ಪತ್ರಿಕೆ, ಬ್ಯಾನರ್ ಪ್ಲೆಕ್ಸ್, ವಿಸಿಟಿಂಗ್ ಕಾರ್ಡ್, ವಿಡಿಯೋ ಡೋಕಿಮೆಂಟ್ರಿ, ಆಡಿಯೋ, ಫೋಟೋಶೂಟ್, ಮೆಮೊಂಟೊ, ಪ್ರಿಟಿಂಗ್ ಮತ್ತು ಸ್ಕ್ಯಾನಿಂಗ್, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಮೊದಲಾದವುಗಳನ್ನು ಕ್ಲಪ್ತ ಸಮಯಕ್ಕೆ ಮಾಡಿಕೊಡಲಾಗುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.