ತಿರುವನಂತಪುರಂ: ಕೇರಳದಲ್ಲಿ ಝೀಕಾ ವೈರಸ್ ಆರ್ಭಟ ಮುಂದುವರೆದಿದ್ದು, ನಿನ್ನೆ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. 22 ತಿಂಗಳ ಮಗು ಸೇರಿ 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೇರಳದಲ್ಲಿ ಝೀಕಾ ವೈರಸ್ಗಳ ಸಂಖ್ಯೆ 18ಕ್ಕೇರಿದೆ.
ಕೇರಳದ ತಿರುವನಂತಪುರಂ, ತ್ರಿಶೂರ್, ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಘಟಕದಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಿದೆ ಅಂತ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.