ಬಂಟ್ವಾಳ: ವಿವಾಹಿತೆಯೊಬ್ಬರನ್ನು ಬೆದರಿಸಿ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಅಯ್ಯೂಬ್ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ..?
ಬಿ.ಸಿ.ರೋಡಿನ ತಲಪಾಡಿಯ ವಿವಾಹಿತ ಮಹಿಳೆಯೊಬ್ಬರಿಗೆ ಇನ್ಸ್ಟಗ್ರಾಮ್ ನಲ್ಲಿ ಮೊಹಮ್ಮದ್ ಅಯ್ಯೂಬ್ ಎಂಬಾತನು ಪರಿಚಯ ಮಾಡಿಕೊಂಡಿದ್ದು, ನಂತರ ಆತನು ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಿ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಾನು ನಿಮ್ಮನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮಹಿಳೆ ಈ ಬಗ್ಗೆ ನಿರಾಕರಿಸಿದರೂ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಕೆಲ ಸಮಯದ ಹಿಂದೆ ಬಿ.ಸಿ.ರೋಡ್ ಪೇಟೆಯ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ಮೊಹಮ್ಮದ್ ಅಯ್ಯೂಬ್ ತನ್ನ ಕಾರಿನಲ್ಲಿ ಬಂದು ಒತ್ತಾಯಿಸಿ ಕಾರಿನಲ್ಲಿ ಕೂರಿಸಿಕೊಂಡು ಪೇಟೆಗೆ ಬಿಡುತ್ತೇನೆ ಎಂದು ಹೇಳಿ, ಮಂಗಳೂರಿನ ವಿವಿಧ ಕಡೆ ಸುತ್ತಾಡಿಸಿ ಮೊಬೈಲ್ ನಲ್ಲಿ ಪೋಟೋಗಳನ್ನು ತೆಗೆದು ಬಳಿಕ ತಲಪಾಡಿಯಲ್ಲಿ ಬಿಟ್ಟುಹೋಗಿದ್ದ. ಆದರೆ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ತಾಕೀತು ಮಾಡಿದ್ದ ಆರೋಪಿ ಯಾರ ಬಳಿಯಾದರೂ ಈ ವಿಚಾರ ಹೇಳಿದರೆ ನಿನಗೆ ತೊಂದರೆಯಾದೀತು ಎಂದು ಬೆದರಿಸಿರುವುದಲ್ಲದೆ ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಡ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಅ ಬಳಿಕ ಮಾರ್ಚ್ ನಲ್ಲಿ ಆರೋಪಿ ಮೊಹಮ್ಮದ್ ಅಯ್ಯೂಬ್ ನು ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾನೆ. ಈ ವಿಚಾರವನ್ನು ಯಾರಲ್ಲಿಯೂ ತಿಳಿಸದಂತೆಯೂ ತನ್ನಲ್ಲಿದ್ದ ಮೊಬೈಲ್ ಪೋಟೋಗಳನ್ನು ವೈರಲ್ ಮಾಡುವುದಾಗಿಯೂ ಬೆದರಿಸಿರುತ್ತಾನೆ. ಸದ್ಯ ಮೊಹಮ್ಮದ್ ಅಯ್ಯೂಬ್ ನ ಉಪಟಳ ತಾಳಲಾರದೆ ಮನೆಯವರಿಗೆ ತಿಳಿಸಿ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತ ಮಹಿಳೆ ದೂರಿನನ್ವಯ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.