ಪುತ್ತೂರು : ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಅಂಗಡಿಗಳು ಮತ್ತು ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸುರುಳಿಮೂಲೆ ನಿವಾಸಿ ಅಶೋಕ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಜು.14 ರಂದು ದೂರು ನೀಡಿದರು.
ನೆಟ್ಟಣಿಗೆಮುಡ್ನೂರು ಗ್ರಾಮದ ಗಾಳಿಮುಖದಿಂದ ಈಶ್ವರಮಂಗಲ ಮತ್ತು ಪಳ್ಳತ್ತೂರಿನಿಂದ ಈಶ್ವರಮಂಗಲದ ವರೆಗೆ ಅನೇಕ ಗೂಡಂಗಡಿಗಳು ಮತ್ತು ಅನೇಕ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಿರುತ್ತಾರೆ. ಜು.12 ರಂದು ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳ ಆದೇಶದ ಮೇರೆಗೆ ಪಂಚಾಯತ್ ಸಿಬ್ಬಂದಿಗಳು ಸುರುಳಿಮೂಲೆ ಎಂಬಲ್ಲಿರುವ ಎರಡು ಗೂಡಂಗಡಿಗಳನ್ನು ತೆರವುಗೊಳಿಸಿರುತ್ತಾರೆ. ತೆರವುಗೊಳಿಸುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ ಆದರೆ ನೆಟ್ಟಣಿಗೆಮುಡ್ನೂರು ಗ್ರಾಮದ ಎಲ್ಲಾ ಅನಧಿಕೃತ ಕಟ್ಟಡವನ್ನು ಮತ್ತು ಗೂಡಂಗಡಿಗಳನ್ನು ತೆರವುಗೊಳಿಸದಿದ್ದರೆ. ನೆಟ್ಟಣಿಗೆಮುಡ್ನೂರು ಗ್ರಾಮದ ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯತ್ ಎದುರುಗಡೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಹಾಗೂ ಸುರುಳಿಮೂಲೆ ಎಂಬಲ್ಲಿ ಗ್ರಾಮ ಪಂಚಾಯತ್ ಗೆ ಸೇರಿದ ಜಾಗವನ್ನು ಗುತ್ತಿಗೆದಾರರಾದ ಮಹಮ್ಮದ್(ಪಾಂಚ) ಎಂಬವರು ಅಕ್ರಮವಾಗಿ ಬೇಲಿ ಹಾಕಿರುತ್ತಾರೆ. ಅಂತವರಿಗೆ ಪಂಚಾಯತ್ ನಿಂದ ಪಂಚಾಯತ್ ಸದಸ್ಯರುಗಳು ಕಾಮಗಾರಿಯನ್ನು ಕೊಡುತ್ತಾರೆ, ಇದು ಎಷ್ಟರ ಮಟ್ಟಿಗೆ ಸರಿ ಆದ ಕಾರಣ ಎಲ್ಲಾ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ಆದಷ್ಟು ಶೀಘ್ರವಾಗಿ ಸಮಸ್ಯೆಗಳನ್ನು ಸರಿಪಡಿಸಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.