ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಯಾಗ್ ನಿಂದ 6. 76 ಲಕ್ಷ ರೂ. ಮೌಲ್ಯದ 169 ಗ್ರಾಂ ಚಿನ್ನಾಭರಣ ಕಳ್ಳತನ ನಡೆದಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರದ ಕಾಪು , ಶಿರ್ವದ ನಿವಾಸಿ ತುಕಾರಾಮ ಭಟ್ (65) ಅವರು, ತಮ್ಮ ಪತ್ನಿ ಮತ್ತು ಮಗಳೊಂದಿಗೆ, ಮಹಾರಾಷ್ಟ್ರದ ಥಾಣೆ ರೈಲ್ವೇ ಸ್ಟೇಷನ್ ನಿಂದ – ಉಡುಪಿಗೆ ಮಗಳ 169 ಗ್ರಾಂ ಚಿನ್ನದ ಆಭರಣ ಬ್ಯಾಗ್ ನಲ್ಲಿ ಬಟ್ಟೆಗಳ ನಡುವೆ ಇಟ್ಟು ಪ್ರಯಾಣಿಸಿದ್ದರು.
ಜು.೧೦ ರಂದು ರಾತ್ರಿ 10:45 ಗಂಟೆಗೆ ರೈಲು ಹೊರಟಿದ್ದು, ರೈಲು ಪ್ರಯಾಣದ ವೇಳೆಯಲ್ಲಿ ಪಕ್ಕದ ಸೀಟಿನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿದ್ದರು. ರೈಲು ಕರ್ನಾಟಕದ ಕುಮಟಾ ಬಳಿ ಬರುತ್ತಿದ್ದಾಗ ಜೋರಾಗಿ ಮಳೆ ಸುರಿಯಲು ಪ್ರಾರಂಭಿಸಿದ್ದು, ಇದೇ ವೇಳೆ ಸಹ ಪ್ರಯಾಣಿಕನಾಗಿದ್ದ ವ್ಯಕ್ತಿಯೂ ನಿಮ್ಮ ಬ್ಯಾಗ್ ಗೆ ಮಳೆ ನೀರು ಬೀಳುತ್ತದೆ ಎಂದು ಬ್ಯಾಗ್ ನ್ನು ಮೇಲಿರಿಸಿದ್ದ. ತನ್ನೊಂದಿಗಿದ್ದ ಇನ್ನೊಬ್ಬ ಮಡ್ ಗಾಂ ನಲ್ಲಿ ಇಳಿದಿದ್ದಾನೆ ಎಂದು ತಿಳಿಸಿದ್ದು ನಂತರ ಆತನು ಭಟ್ಕಳ ರೈಲ್ವೇ ಸ್ಟೇಷನ್ ನಲ್ಲಿ ಇಳಿದಿದ್ದ ಹೋಗಿದ್ದ . ಆದರೆ ಬಳಿಕ ಈ ವ್ಯಕ್ತಿಗಳ ನಡವಳಿಕೆ ಕಂಡು ಸಂಶಯಗೊಂಡು ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ರೈಲು ಚಲನೆಯಲ್ಲಿ ಇದ್ದ ಕಾರಣ ಪ್ರಯಾಣ ಮುಂದುವರೆಸಿ ಮನೆಗೆ ತೆರಳಿರುವುದಾಗಿ ದೂರಿನಲ್ಲಿ ತುಕಾರಾಮ ಭಟ್ ವಿವರಿಸಿದ್ದಾರೆ.