ಗೋಹತ್ಯೆಯ ನೆಪದಲ್ಲಿ ಯಾರಾದರೂ ಗೂಂಡಾಗಳು ನಿಮ್ಮ ಮೇಲೆ ದಾಳಿ ಮಾಡಲು ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ದಾಳಿ ಮಾಡಬಹುದು ಎಂದು ಕೋಮು ಪ್ರಚೋದನೆಯ ಬರಹವನ್ನು ವಾಟ್ಸಾಪ್ ಹಾಗೂ ಫೇಸ್‌ಬುಕ್ ನಲ್ಲಿ ಹಾಕಿದ ವ್ಯಕ್ತಿಯೊಬ್ಬನ ವಿರುದ್ಧ ಸವಣೂರು ಹಿಂದೂ ಜಾಗರಣ ವೇದಿಕೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದೆ.
ಕಡಬ ತಾಲೂಕಿನ ಸವಣೂರು ಯಾವುದೇ ಕೋಮು ಪ್ರಚೋದನೆಯಿಲ್ಲದೆ ಜನ ನೆಮ್ಮದಿಯಿಂದ ಜೀವ ನಡೆಸುತ್ತಿರುವ ಗ್ರಾಮೀಣ ಪ್ರದೇಶವಾಗಿದ್ದು, ಇದೀಗ ಸವಣೂರಿನ ಆರಿಗಮಜಲಿನ ನಿಝಾರ್ ಎಂಬಾತ ಗೋಹತ್ಯೆಯ ನೆಪದಲ್ಲಿ ಯಾರಾದರೂ ಗೂಂಡಾಗಳು ನಿಮ್ಮ ಮೇಲೆ ದಾಳಿ ಮಾಡಲು ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ದಾಳಿ ಮಾಡಬಹುದು ಎಂದು ಕೋಮು ಪ್ರಚೋದನೆಯ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು,ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.