ಪುತ್ತೂರು : ಭಾರೀ ಮಳೆಗೆ ಪುತ್ತೂರು ಕಸಬಾ ಸಾಮೆತ್ತಡ್ಕ ನಿವಾಸಿ ಆಶೋಕ ಎಂಬವರ ಮನೆ ಆವರಣ ಗೋಡೆ ಕುಸಿದು ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ , ನಗರಸಭಾಧಿಕಾರಿಗಳಾದ ಶ್ವೇತಾ ಕಿರಣ್ ,ಇಂಜಿನಿಯರ್ ಶ್ರೀಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ದುರಸ್ಥಿ ಕಾರ್ಯ ನಡೆಸಿ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.