ಪುತ್ತೂರು: ತುಳುನಾಡ ಗಾನ ಗಂಧರ್ವ ಬಿರುದಾಂಕಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಜಗದೀಶ್ ಪುತ್ತೂರು ಅವರು ಸಂಗೀತ ನಿರ್ದೇಶನ ಮಾಡಿ ಹಾಡಿರುವ ಮತ್ತು RJ. ಪ್ರಸನ್ನ 93.5 RED FM ಮಂಗಳೂರು ರವರ ಸಾಹಿತ್ಯದ ಶ್ರೀ ಗುರು ರಾಯರ ಭಕ್ತಿಗೀತೆ ‘ಗುರುವಿನ ಮಹಿಮೆಯ ಮಂತ್ರಾಕ್ಷತೆ ಬೆಳಗಿತು ಈ ಬಾಳನು..’ ವಿಡಿಯೋ ಶ್ರೀ ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಜು.19ರಂದು ಬಿಡುಗಡೆಗೊಳ್ಳಲಿದೆ.
ಛಾಯಾಗ್ರಾಹಣ ಅರುಣ್ ರೈ ಪುತ್ತೂರು ಹಾಗೂ ಸಂಕಲನ ಜೆಪಿ ಬಂದ್ಯೋಡ್ ಮತ್ತು ಬೆಂಗಳೂರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗೌರಿ ನಾಗರಾಜ್ ದಂಪತಿಗಳ ರವರ ಸಹಕಾರದಲ್ಲಿ ಮೂಡಿ ಬಂದಿದೆ.