ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಗಳಲ್ಲೊಂದಾದ ಮುಳಿಯ ಜ್ಯುವೆಲ್ಸ್‌ನ ಗ್ರಾಹಕರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ನಕಲಿ ಸಂದೇಶ ರವಾನೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಸುಳ್ಳು ಸಂದೇಶದಲ್ಲಿ ‘ಕೇಶವ ಮುಳಿಯಾ ಗ್ರಾಹಕರ ಗಮನಕ್ಕೆ ನಮ್ಮ ಮಳಿಗೆಯ ಸುತ್ತ-ಮುತ್ತ ಕೋವಿಡ್ ಪಾಸಿಟಿವ್ ಬಂದ ಕಾರಣ 19-07-2021ರ ತನಕ ಮುಚ್ಚಳಾಗಿದೆ ಗ್ರಾಹಕರಲ್ಲಿ ಮನವಿ’ ಎಂದಿದೆ. ಈ ಘಟನೆ ಬೆಳಕಿಗೆ ಬಂದ ಕ್ಷಣದಲ್ಲೇ ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಅವರು ಇದೊಂದು ಸುಳ್ಳು ಸಂದೇಶವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.