ಉಡುಪಿ: ಬಜಗೋಳಿ ಮೂಲದ ಕರುಣಾಕರ್ ಪುತ್ರನ್ (50) ಅವರು ಜುಲೈ 15ರಂದು ಮುಂಬೈನ ಸ್ಟಾರ್ ಪ್ಲಾನೆಟ್ ಹೋಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಪುತ್ರನ್ ಅವರು ಬೇರೊಬ್ಬರಿಂದ ಸಾಲ ತೆಗೆದುಕೊಂಡಿದ್ದರು. ಲಾಕ್‌ಡೌನ್ ಹಿನ್ನೆಲೆ ತೀವ್ರ ಆರ್ಥಿಕ ಸಮಸ್ಯೆಗೆ ಒಳಗೊಂಡಿದ್ದರು. ಅಲ್ಲದೇ, ಕಟ್ಟಡದ ಮಾಲೀಕರು ಕೂಡಾ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ನೊಂದ ಪುತ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಪುತ್ರನ್ ಅವರು ಪತ್ನಿ ಶಾಲಿನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪುತ್ರನ್ ಅವರು ಕಳೆದ 25 ವರ್ಷಗಳಿಂದ ಹೊಟೇಲ್‌ನಲ್ಲಿ ವ್ಯವಹರಿಸುತ್ತಿದ್ದರು. ಮೃತದೇಹವನ್ನು ಜುಲೈ 17ರಂದು ಬಜಗೋಳಿಗೆ ತರಲಾಗಿದೆ.