ಉಡುಪಿ: ಕೋರ್ಟ್ ರೋಡ್ ನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಣ ಜಮೆ ಮಾಡಲು ಬಂದಿದ್ದ ಗ್ರಾಹಕರೊಬ್ಬರ ಕೈಯಿಂದ ಕಳ್ಳನೊಬ್ಬ ಹಣ ಎಗರಿಸಿದ ಘಟನೆ ವರದಿಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಜು.16ರ ಶನಿವಾರ ಗ್ರಾಹಕರೊಬ್ಬರು ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲೆಂದು ಬಂದಿದ್ದಾರೆ. ಈ ವೇಳೆ ಬ್ಯಾಂಕ್ ಒಳಗೆ ಪ್ರವೇಶಿಸಿದ್ದ ಕಳ್ಳ ಗ್ರಾಹಕರ ಬಳಿ ಇದ್ದ ನಗದು ಬಂಡಲ್ 1.90 ಲಕ್ಷ ರೂಪಾಯಿಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಬ್ಯಾಂಕ್ ಮುಚ್ಚಲಾಗಿದ್ದು , ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.