ಪುತ್ತೂರು : ಕೆಲದಿನಗಳಿಂದ ಮುರಳೀಕೃಷ್ಣ ಹಸಂತಡ್ಕ ಅವರು ಶರ್ಮಹಾನ್ ಸೊಸೈಟಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಅಪಪ್ರಚಾರ ಕೇಳಿ ಬರುತ್ತಿದ್ದು ಈ ಬಗ್ಗೆ ಸ್ವತಃ ಮುರಳೀಕೃಷ್ಣ ಹಸಂತಡ್ಕ ಅವರೇ ಸ್ಪಷ್ಟನೆಯನ್ನ ನೀಡಿದ್ದಾರೆ.
ಶರ್ಮಹಾನ್ ಸೊಸೈಟಿಯಲ್ಲಿ ಆರಂಭದ ದಿನಗಳಲ್ಲಿ ನಾನು ನಿರ್ದೇಶಕನಾಗಿದ್ದು, ಮೂರು ಮೀಟಿಂಗ್‌ಗೆ ಹಾಜರಾಗಿದ್ದೇನೆ. ಬಳಿಕ ಸೋಸೈಟಿಯಲ್ಲಿ ಕೆಲಸ ಮಾಡಲು ಸಮಯಾವಕಾಶ ಇಲ್ಲದ ಕಾರಣ, ಅಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ಬಡವರಿಂದ ಮೋಸ ಮಾಡಿ ಹಣವನ್ನ ಸಂಗ್ರಹ ಮಾಡಿದ್ದಾರೆ ಅನ್ನೋ ವಿಚಾರದಲ್ಲಿ, ನಮ್ಮ ಯಾವುದೇ ಪಾಲುದಾರಿಕೆ ಇಲ್ಲ ಅನ್ನೋದು, ಕಾನೂನಿನ ಮೂಲಕವೇ ಗೊತ್ತಾಗಿದೆ. ನನ್ನ ಏಳಿಗೆಯನ್ನು ಸಹಿಸಲಾಗದ ಕೆಲ ಹಿತ ಶತ್ರುಗಳು ನನ್ನ ಬಗ್ಗೆ ಷಡ್ಯಂತ್ರ ಮಾಡುತ್ತಿರುವುದು ತಿಳಿದು ಬಂದಿದೆ.
ಸಾರ್ವಜನಿಕ ಜೀವನದಲ್ಲಿ ಇಲ್ಲಿಯವರೆಗೂ ಯಾವುದೆ ಕಪ್ಪು ಚುಕ್ಕೆ ಬರುವ ಕೆಲಸ ಮಾಡಿಲ್ಲ, ಅವ್ಯವಹಾರ ಮಾಡಿದ್ದೇವೆ ಎಂದು ಹೇಳುವವರು ಯಾರದಾರು ಇದ್ದರೆ ಅವರು ಒಳ್ಳೆಯ ಕ್ಷೇತ್ರಕ್ಕೆ ಬಂದು ಹೇಳಿ ಎಂದು ಹೇಳಿದ್ದಾರೆ. ಇನ್ನು ಈಗ ಬಂದಿರುವ ಅಪಪ್ರಚಾರಕ್ಕೂ ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ ಎಂದಿದ್ದಾರೆ.