ವಿಟ್ಲ: ತಾನು ಪ್ರೀತಿಸುತ್ತಿದ್ದ ಯುವತಿಯ ಮನೆಗೆ ನುಗ್ಗಿ ಪ್ರೀತಿಯ ವಿಷಯವಾಗಿ ಜಗಳ ನಡೆಸಿ, ನಂತರ ಆಕೆಯ ತಂಗಿಯ ಮೊಬೈಲ್ ಗೆ ಕರೆ ಮಾಡಿ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಆಕೆಯ ಮದುವೆ ನಿಲ್ಲಿಸಿದ್ದು, ಈ ಬಗ್ಗೆ ಯುವತಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆದಿದೆ.
ಆರೋಪಿಯನ್ನು ಇರ್ಫಾನ್ ಎಂದು ಗುರುತಿಸಲಾಗಿದೆ. ಇರ್ಫಾನ್ ಯುವತಿಗೆ 3 ವರುಷಗಳಿಂದ ಪರಿಚಯವಿದ್ದು, ಸುಮಾರರು ಎಂಟು ತಿಂಗಳ ಹಿಂದೆ ಆಕೆಯ ಮನೆಗೆ ಹೋಗಿ ಪ್ರೀತಿಯ ವಿಷಯವಾಗಿ ಜಗಳವಾಡಿದ್ದು,ನಂತರ ಯುವತಿಯ ತಂಗಿಯ ಮೊಬೈಲ್ ಗೆ ಕರೆ ಮಾಡಿ ಹಳೆಯ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಯುವತಿಗೆ ನಿಶ್ಚಯವಾಗಿರುವ ವಿವಾಹವನ್ನು ನಿಲ್ಲಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ ಹಾಗೂ ಮದುವೆಯಾಗುವ ಮನೆಯವರಿಗೂ ಇರ್ಫಾನ್ ಕರೆ ಮಾಡಿ ಬೆದರಿಸಿ ಮದುವೆಯನ್ನು ನಿಲ್ಲಿಸಿದ್ದಾನೆ. 2020 ರ ಡಿಸೆಂಬರ್ ನಿಂದ ಇಂದಿನವರೆಗೂ ಯುವತಿಗೆ ಮತ್ತು ಅವಳ ಮನೆಯರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣದ ಕುರಿತಾಗಿ ವಿಟ್ಲ ಠಾಣೆಯಲ್ಲಿ ಅ.ಕ್ರಂ 95/2021 ಕಲಂ:506 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.