ವಿಟ್ಲ : ವ್ಯಕ್ತಿಯೋರ್ವರು ತೋಡಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಕಸಬಾ ಗ್ರಾಮದ ನಡುವಡ್ಕದ ನಾಯ್ತೊಟ್ಟು ಎಂಬಲ್ಲಿ ನಡೆದಿದೆ. ಬಳಂತಿಮುಗೇರು ಶಾಲೆ ಸಮೀಪದ ನಿವಾಸಿ ಅವಿವಾಹಿತ ವಸಂತ ನಾಯ್ಕ (40) ಮೃತಪಟ್ಟ ವ್ಯಕ್ತಿ.
ನಡೆದು ಸಾಗುತ್ತಿದ್ದಾಗ ಆಕಸ್ಮಿಕವಾಗಿ ಹೊಳೆಗೆ ಕಾಲು ಜಾರಿ ಬಿದ್ದಿದ್ದು, ಮೃಟಪಟ್ಟಿರುತ್ತಾರೆ. ಇದೀಗ ಮೃತ ದೇಹವನ್ನು ಪತ್ತೆ ಮಾಡಲಾಗಿದೆ.
ಸ್ಥಳಕ್ಕೆ ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ, ಗ್ರಾಮಕರಣಿಕರು ಪ್ರಕಾಶ್, ಗ್ರಾಮಸಹಾಯಕ ಲಿಂಗಪ್ಪ ಅವರು ಭೇಟಿ ನೀಡಿದರು. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.