ಬೆಂಗಳೂರು : ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಅನ್ಲಾಕ್ 3.0 ನಾಳೆ ಅಂತ್ಯಗೊಳ್ಳಲಿದೆ. ಆದುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ಅನ್ಲಾಕ್ 4 ರ ಕುರಿತು ಚರ್ಚೆಯ ಸಭೆ ನಡೆಸಿದರು.ಈ ಸಭೆಯಲ್ಲಿ ನೈಟ್ ಕರ್ಪ್ಯು ಅನ್ನು ರಾತ್ರಿ 10 ರಿಂದ ಬೆಳಗ್ಗೆ 5 ರ ವರಗೆ ವಿಧಿಸಲು ತೀರ್ಮಾನಿಸಲಾಯಿತು. ಸಿನಿಮಾ ಥಿಯೇಟರ್, ರಂಗಮಂದಿರಗಳನ್ನು ಶೇ. 50 ರಷ್ಟು ಗ್ರಾಹಕರೊಂದಿಗೆ ತೆರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಉನ್ನತ ಶಿಕ್ಷಣ ಕಾಲೇಜುಗಳನ್ನು ಜುಲೈ 26 ರಿಂದ ಪ್ರಾರಂಭ ಮಾಡಲು ಅವಕಾಶ ನೀಡಲಾಗಿದೆ. ಕನಿಷ್ಠ ಒಂದು ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡವರೆಗೆ ಮಾತ್ರ ಅವಕಾಶ ನೀಡಲಾಗಿದೆ.ಅನ್ಲಾಕ್ ಆದರೂ ಪಬ್ ತೆರೆಯಲು ಅವಕಾಶ ನೀಡಿಲ್ಲ, ಇವುಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಅಲ್ಲದೆ ಮದುವೆ ಹಾಗೂ ಇತರ ಸಮಾರಂಭಗಳಿಗೆ ಹಾಕಿರುವ ಮಿತಿಯನ್ನು ಹೆಚ್ಚುಗೊಳಿಸಿಲ್ಲ. ಈ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟ ಕೂಡಾ ಮಾಡಿಲ್ಲವಾಗಿದೆ.ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಆಶ್ವಥ ನಾರಾಯಣ, ಸಚಿವರುಗಳಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.