ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಬುಧವಾರ ಕರಾವಳಿಯಲ್ಲಿ ಆಚರಿಸಲಾಗುತ್ತಿದೆ.
ಪುತ್ತೂರಿನ ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿಯೂ ಸಂಭ್ರಮದ ಈದುಲ್ ಅಝ್ಹಾ ವನ್ನು ಆಚರಿಸಲಾಯಿತು.
ಇಬ್ರಾಹೀಂ ನಬಿ (ಅಸ ) ಅವರ ತ್ಯಾಗಮಯ ಜೀವನ ನಮಗೆ ಮಾದರಿಯಾಗಲಿ ಇರ್ಷಾದ್ ಸಖಾಫಿ ಖತೀಬ್ ಕೆಮ್ಮಾಯಿ ರವರು ಹೇಳಿದರು.
ಸರಕಾರದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಹಬ್ಬ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್, ಈದ್ ಖುತಾº ನೆರವೇರಲಿದೆ.