ಸುಳ್ಯ : ಪೈಂಬೆಚ್ಚಾಲು ನಿವಾಸಿ ಬೀರಾನ್ ಎಂಬವರ ಪುತ್ರ ಅಂದಾಞಿ ಎಂಬುವವರು ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ನಿನ್ನೆ ಅವರ ಮೃತ ದೇಹವು ಕೇರಳದ ಗಡಿ ಭಾಗದಲ್ಲಿರುವ ಪಂಜಿಕಲ್ಲು ಪ್ರದೇಶದಲ್ಲಿ ಲಭಿಸಿದೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.