ಬೆಳ್ತಂಗಡಿ: ಅಕ್ಕನ ಅಂತರ್ಜಾತಿ ಪ್ರೇಮ ಮತ್ತು ಆತನೊಂದಿಗೆ ಆಕೆಯ ಜತೆಗೆ ಮದುವೆ ನಿಗದಿಯಾಗುವ ವಿಚಾರವಾಗಿ ತೀವ್ರ ಚಿಂತೆಗೊಳಗಾದ ಸಹೋದರ ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 18ರಂದು ನಡೆದಿದೆ.
ಬೆಳ್ತಂಗಡಿ ಬರಾಯಕನ್ಯಾಡಿ ಗೋಳಿತೊಟ್ಟು ಪಲ್ಕೆ ನಿವಾಸಿ ಕಾರ್ತಿಕ್ (19)ಆತ್ಮಹತ್ಯೆಗೈದ ಯುವಕ. ತನ್ನ ಅಕ್ಕ ಅನ್ಯಜಾತಿಯವನೊಂದಿಗೆ ಪ್ರೀತಿಸಿ ಮದುವೆಯಾಗುವ ವಿಚಾರದಲ್ಲಿ ಮನೆಯವರು ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡು ಕೃತ್ಯವೆಸಗಿಕೊಂಡಿರಬಹುದು ಎಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.