ಪುತ್ತೂರು:ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಕನ್ನಡ ಸೇನೆ ಕರ್ನಾಟಕ ಸಂಘಟನೆ ಮಂಡ್ಯ ಜಿಲ್ಲಾ ಘಟಕವು ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕನ್ನಡ ಸೇನೆ ಕರ್ನಾಟಕ ಸಂಘಟನೆ ಮಂಡ್ಯ ಜಿಲ್ಲಾ ಘಟಕ ವತಿಯಿಂದ ಡಿ. ೧೨ರಂದು ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಜಾಗೃತಿ ಸಮಾವೇಶ, ಹಾಸ್ಯ ಮತ್ತು ಮಿಮಿಕ್ರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಕಾಂತಪ್ಪ ಸಾಲಿಯಾನ್ ಮತ್ತು ಸುಂದರಿ ದಂಪತಿ ಪುತ್ರನಾದ ಚಂದ್ರಶೇಖರ್‌ರವರು ಕೃಷಿ ಮೇಸ್ತ್ರಿ, ಟಿಂಬರ್ ಕೆಲಸ ನಿರ್ವಹಿಸಿ ಪ್ರಸ್ತುತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕರುನಾಡ ಕಾಯಕ ಕರ್ತೃ , ರಾಜ್ಯಾಧ್ಯಕ್ಷ ಕೆ ಆರ್ ಕುಮಾರ್ ಅವರ ನೇತ್ರತ್ವದಲ್ಲಿ ನಾಡು ನುಡಿ ನಿಷ್ಠೆ ಸೇವೆಯ ಧ್ಯೇಯದೊಡನೆ ಕಾರ್ಯನಿರ್ವಹಿಸುತ್ತಿರುವ ಮಂಡ್ಯ ಜಿಲ್ಲಾ ಘಟಕವು ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಚಂದ್ರಶೇಖರ್ ಅವರು ಕನ್ನಡದ ಕುರಿತಂತೆ ಅದಮ್ಯ ಸೇವೆ ಸಲ್ಲಿಸಿದ್ದು, ನಾಡು ನುಡಿ ಸಂಸ್ಕೃತಿಯ ಬಗ್ಗೆ ಅಪಾರ ಗೌರವಾಭಿಮಾನಗಳನ್ನು ಹೊಂದಿದವರಾಗಿದ್ದು, ಇವರ ಕನ್ನಡ ಅಭಿಮಾನ ಹಾಗೂ ಪ್ರತಿಭೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡದ ಪ್ರತಿಭಾನ್ವಿತ ಕನ್ನಡ ಪ್ರೇಮಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಎ ಸೇರಿ ಹಲವರಿಗೆ ಕನ್ನಡ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
