ಕಟಪಾಡಿ: ಸತ್ಯದ ತುಳುವೆರ್ (ರಿ )ಮಹಿಳಾ ಘಟಕದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಡಿ.13 ರಂದು ಕಟಪಾಡಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಮೇಘ ಕೊಳಲಗಿರಿ, ಪ್ರದಾನ ಕಾರ್ಯದರ್ಶಿಯಾಗಿ ಶೃತಿ ಕಡೆಕಾರ್, ಕೋಶಾಧಿಕಾರಿ ರೇಖಾ ಕುರ್ಕಾಲು. ಜೊತೆ ಕಾರ್ಯದರ್ಶಿಯಾಗಿ ಸುರಕ್ಷಾ ಉಪಾಧ್ಯಕ್ಷರಾಗಿ ಚೈತ್ರ,ಉಪಾಧ್ಯಕ್ಷರಾಗಿ ಆಶ ಕುರ್ಕಾಲು ಮತ್ತು ಚೈತ್ರ ತೊಟ್ಟಂ ಸಮಿತಿ ಸದಸ್ಯರಾಗಿ ಶಾಂತ ಕುರ್ಕಾಲು, ಸರಿತ ತೊಟ್ಟಂ, ಸುನಂದ ಕುರ್ಕಾಲು ಅವಿರೋದವಾಗಿ ಆಯ್ಕೆಯಾದರು. ಹಾಗು ಸಂಸ್ಥಾಪಕರಾದ ಶಿವಪ್ರಕಾಶ್ ಎಸ್ ಮಲ್ಪೆ ಯವರಿಂದ ಅಧಿಕಾರ ವಹಿಸಿಕೊಂಡರು. ಈ ಸಂಧರ್ಭದಲ್ಲಿ ಅನಾರೋಗ್ಯದಿಂದ ಬಳಲುತಿರುವ ಮಂಜುನಾಥ ಭಾರತೀ ದಂಪತಿಗಳ 3 ವರುಷದ ಪ್ರಾಯದ ಮಗು ಆದ್ಯಳಿಗೆ ಧನಸಹಾಯ ನೀಡಲಾಯಿತು.