ಬೆಂಗಳೂರು : ಸಿ ಎಂ ಸ್ಥಾನ ಬದಲಾವಣೆಯ ವಿಚಾರವಾಗಿ ಮುಂದಿನ ಸಿ ಎಂ ಸ್ಥಾನಕ್ಕೆ ಸದ್ಯ ಕರ್ನಾಟಕ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ರವರ ಹೆಸರು ಕೇಳಿಬರುತ್ತಿದ್ದು ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚು ಎಂಬ ವಿಚಾರಗಳು ಎಲ್ಲೆಡೆ ಕೇಳಿಬರುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕಟೀಲು ಅವರ ಭಾವಚಿತ್ರವನ್ನೇ ಹಾಕಿ ಮುಂದಿನ ಸಿಎಂ ಅವರಿಗೆ ಅಭಿನಂದನೆಗಳು ಎನ್ನುವ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿಯ ನಡುವೆ ಸಿಎಂ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುತ್ತಿದ್ದು,ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಹಲವು ರೀತಿಯಲ್ಲಿ ಲಾಭಿ ಮಾಡತೊಡಗಿದ್ದಾರೆ. ಆದರೇ ಸದ್ದಿಲ್ಲದೇ ಹೈ ಕಮಾಂಡ್ ನಳಿನ್ ಕುಮಾರ್ ಅವರಿಗೆ ಮಣೆ ಹಾಕಿದೆ ಎಂಬ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
ಹಲವು ದಿನಗಳಿಂದ ನಾಯಕತ್ವ ಬದಲಾವಣೆಯ ಕೂಗು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ ಹಲವು ನಾಯಕರು ದೆಹಲಿ ಪ್ರಯಾಣ ಹಲವು ನಾಯಕರ ಹೇಳಿಕೆಗಳು ಕೆಲ ದಿನಗಳಿಂದ ವೇಗ ಪಡೆದಿತ್ತು ಇನ್ನೂ ಇದರಲ್ಲಿ ನಳಿನ್ ಕುಮಾರ್ ಹೆಸರು ಸದ್ಯ ಸುದ್ದಿಯಲ್ಲಿದೆ ಹಾಗೂ ಸದ್ಯ ಸಿಎಂ ಸ್ಥಾನಕ್ಕೆ, ಬಿ ಎಲ್ ಸಂತೋಷ್, ನಳಿನ್ ಕುಮಾರ್ ಕಟೀಲು ರವರ ಹೆಸರು ಮುಂಚೂಣಿಯಲ್ಲಿದೆ.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರೂ, ಸತತವಾಗಿ ನಾಲ್ಕನೇ ಬಾರಿ ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರದ ಸಂಸದೀಯ ಮತ್ತು ವ್ಯವಹಾರ ಹಾಗೂ ಕಲ್ಲಿದ್ದಲ್ಲು ಖಾತೆಯ ಸಚಿವರೂ ಆಗಿರುವ ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಷಿಯವರ ಹೆಸರೂ ಕೂಡಾ ಮುಖ್ಯಮಂತ್ರಿ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ. ಅಧಿಕೃತ ಮಾಹಿತಿಗಳು ಘೋಷಣೆಯ ಬಳಿಕವೇ ತಿಳಿಯಬೇಕಿದೆ..