ಪುತ್ತೂರು : ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಅಂಚೆ ಕಛೇರಿಗಳಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಗೆ ಏಜೆಂಟ್‌ಗಳನ್ನು ಸಂದರ್ಶನದ ಮೂಲಕ ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಕನಿಪ್ಟ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ ಯಾ ರಾಜ್ಯ ಸರಕಾರದಿದ ಮಾನ್ಯತೆ ಪಡೆದ ಬೋರ್ಡ್‌ಗಳು ನಡೆಸುವ ಹತ್ತನೇ ತರಗತಿಗೆ ಸಮನಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕನಿಷ್ಟ 18 ವರ್ಷ ಮತ್ತು ಗರಿಷ್ಟ 50 ವರ್ಷ ಆಗಿರಬೇಕು. ಆ.02 ರಂದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಇತ್ತೀಚೆಗಿನ ಎರಡು ಪಾಸ್ ಪೋರ್ಟ್ ಸೈಜ್ ಭಾವಚಿತ್ರ, ಹತ್ತನೇ ತರಗತಿಯ ಅಂಕಪಟ್ಟಿ, ಆಧಾರ್, ಪಾನ್ ಕಾರ್ಡ್ ಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುಂತೆ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.