ನವದೆಹಲಿ: ಕೊರೊನಾ ಹಿನ್ನಲೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಪರವಾನಿಗೆಗಳಂತಹ ದಾಖಲೆಗಳ ಸಿಂಧುತ್ವವನ್ನು ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಿದೆ.
ಈ ಆದೇಶವು ಫೆಬ್ರವರಿ 1, 2020 ರಿಂದ ಸಿಂಧುತ್ವ ಮುಗಿದಿರುವ ಅಥವಾ ಸೆಪ್ಟೆಂಬರ್ 30, 2021ರ ವೇಳೆಗೆ ಮುಕ್ತಾಯಗೊಳ್ಳುವ ಎಲ್ಲಾ ದಾಖಲೆಗಳನ್ನು ಒಳಗೊಂಡಿದ್ದು, ಇದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಾಗ ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಸಹಾಯ ಮಾಡುತ್ತದೆ ಸಚಿವಾಲಯ ತಿಳಿಸಿದೆ.
ಇನ್ನು ಕೊರೊನಾ ಹರಡುವುದನ್ನು ತಡೆಗಟ್ಟುವ ಅಗತ್ಯವನ್ನು ಪರಿಗಣಿಸಿ, ಎಂಒಆರ್ ಟಿ ಮತ್ತು ಎಚ್, ಫಿಟ್ನೆಸ್, ಪರ್ಮಿಟ್, ಪರವಾನಗಿ, ನೋಂದಣಿ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳ ಸಿಂಧುತ್ವವನ್ನು 30 ಸೆಪ್ಟೆಂಬರ್ 2021 ರವರೆಗೆ ಮಾನ್ಯವೆಂದು ಪರಿಗಣಿಸಬಹುದು ಎಂದು ಅಧಿಕಾರಿಗಳಿಗೆ ಸಚಿವಾಲಯವು ಸಲಹೆ ನೀಡಿದೆ.
ಈ ಮೊದಲು, ದಾಖಲೆಗಳ ಸಿಂಧುತ್ವದ ಗಡುವನ್ನು ಜೂನ್ 30ಕ್ಕೆ ನಿಗದಿಪಡಿಸಲಾಗಿತ್ತು. ಪ್ರತ್ಯೇಕವಾಗಿ, ಚಾಲನಾ ಪರವಾನಗಿ ವಿತರಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ ಎಂದು ತಿಳಿಸಿದೆ.