ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜು ಮತ್ತು ಸಿಎ ತರಬೇತಿ ಸಂಸ್ಥೆ ವಿಕಾಸ್ ಇದರ ಸಹಯೋಗದೊಂದಿಗೆ ಉಪನ್ಯಾಸಕರಿಗೆ ಮತ್ತು ಆಸಕ್ತರಿಗೆ ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ಆ.4 ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ವೃತ್ತಿಪರ ಕೋರ್ಸ್ ತರಬೇತುದಾರ ರಾಜ್‌ಗಣೇಶ್ ಕಾಮತ್ ಮಾಹಿತಿ ನೀಡಲಿದ್ದಾರೆ. ಆಸಕ್ತರಿಗೆ ಇದರ ಜೊತೆಗೆ ಸಿಎ ತರಬೇತಿಯು ನಡೆಯಲಿದೆ. ಈ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ದೂರವಾಣಿ ಸಂಖ್ಯೆ 8971634042 ಅಥವಾ 9686524162 ಯನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.