ಪುತ್ತೂರು: ಕೋವಿಡ್ -19 ಸೋಂಕಿನ ೨ನೇ ಅಲೆ ನಿಯಂತ್ರಣದಲ್ಲಿರುವಾಗಲೇ ಮತ್ತೆ ಏರಿಕೆ ಹಂತ ಕಂಡ ಹಿನ್ನಲೆಯಲ್ಲಿ ನಗರಸಭೆಯಿಂದ ರೋಟರಿ ಸಂಘಸಂಸ್ಥೆಗಳ ಮೂಲಕ ಜಾಗೃತಿ ಅಭಿಯಾನ ನಿರ್ಣಯಿಸಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ರೋಟರಿ ಸಂಸ್ಥೆಗಳಿಂದ ನಗರಸಭೆ ಮೂಲಕ ರಿಕ್ಷಾಗಳಿಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನ ಆ.೯ರಂದು ಪುತ್ತೂರು ನಗರಸಭೆಯಲ್ಲಿ ನಡೆಯಿತು.
ರೋಟರಿಯ 7 ಸಂಸ್ಥೆಗಳು ಮತ್ತು ಇನ್ನರ್‌ವೀಲ್ ಕ್ಲಬ್ ವತಿಯಿಂದ ಪುತ್ತೂರು ನಗರಸಭೆಗೆ ಸುಮಾರು ೧ ಸಾವಿರ ಕೋವಿಡ್ ಜಾಗೃತಿ ಸ್ಟಿಕ್ಕರ್ ವಿತರಣೆ ಮಾಡಲಾಯಿತು. ಸ್ಟಿಕ್ಕರ್‌ಗಳನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪೌರಾಯುಕ್ತೆ ಮಧು ಎಸ್ ಮನೋಹರ್, ರೋಟರಿ ಕ್ಲಬ್ ಮತ್ತು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ್ ನಾಯ್ಕ್ ಅವರು ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಧಾನ ಕಾರ್ಯದರ್ಶಿ ಗುರುರಾಜ್, ರೋಟರಿ ಸೆಂಟ್ರಲ್ ಅಧ್ಯಕ್ಷ ನವಿನ್ ಚಂದ್ರ ನಾಕ್, ನಿಯೋಜಿತ ಅಧ್ಯಕ್ಷ ರಫೀಕ್ ದರ್ಬೆ, ರೋಟರಿ ಸ್ವರ್ಣದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ರೋಟರಿ ಎಲೈಟ್‌ನ ಅಧ್ಯಕ್ಷ ಮನ್ಸೂರ್, ಪ್ರಧಾನ ಕಾರ್ಯದರ್ಶಿ ರಂಜಿತ್ ಮತಾಯಿಸ್, ರೋಟರ್‍ಯಾಕ್ಟ್‌ನ ಅಡ್ವೈಸರ್ ಆಸ್ಕರ್ ಆನಂದ್, ಕ್ಲಬ್ ಸರ್ವಿಸ್ ಮೌನೇಶ್ ವಿಶ್ವಕರ್ಮ, ರೋಟರಿ ಯುವ ಅಧ್ಯಕ್ಷ ಭರತ್ ಪೈ, ರೋಟರಿ ಪೂರ್ವದ ಶ್ಯಾಮ್‌ಪ್ರಸಾದ್, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಬಿ.ಕೆ, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯಾಧ್ಯಕ್ಷ ಜಯರಾಮ ಕುಲಾಲ್, ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕ ಸಂಘದ ನಿಕಟಪೂರ್ವ ಅಧ್ಯಕ್ಷ ಸಿಲ್ವೆಸ್ಟಾರ್, ಪ್ರಧಾನ ಕಾರ್ಯದರ್ಶಿ ತಾರಾನಾಥ ಗೌಡ ಉಪಸ್ಥಿತರಿದ್ದರು.