ಗಡಿಯಾರ ಶಾಲೆಯಲ್ಲಿ ಅಧ್ಯಾಪಕ ವೃಂದ, ಯುವ ಕೇಸರಿ ಗಡಿಯಾರ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಶ್ರೀಮತಿ ಸುಚೇತಾ ಮುಖ್ಯ ಶಿಕ್ಷಕಿ ಇವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.
ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸಮುದಾಯವನ್ನು ಸಮರ್ಥವಾಗಿ ಬಳಸಿ, ಶಿಕ್ಷಣಕ್ಕೆ ಆಧುನಿಕ ಸ್ಪರ್ಶ ನೀಡಿ,ಶಾಲೆಯಲ್ಲಿ ವ್ಯವಸ್ಥಿತ ಪ್ರಯೋಗಾಲಯ, ಗ್ರಂಥಾಲಯ,ಕಂಪ್ಯೂಟರ್ ಕಲಿಕಾ ಕೊಠಡಿ, ಸ್ಮಾರ್ಟ್ ಕ್ಲಾಸ್,ಸಭಾಭವನ,ವಿಶಾಲವಾದ ಆಟದ ಮೈದಾನ,ಶಾಲಾವನ ಹೀಗೆ ಹತ್ತು ಹಲವು ಕಲಿಕಾ ಸ್ನೇಹಿ ವ್ಯವಸ್ಥೆಗಳನ್ನು ದಾನಿಗಳ ಸಹಕಾರದಿಂದ ಮಾಡಿ, ಕೇವಲ 5 ವರ್ಷಗಳಲ್ಲಿ 83 ಲಕ್ಷದಷ್ಟು ವಿವಿಧ ಅನುದಾನಗಳನ್ನು ಶಾಲೆಗೆ ತರಿಸಿ,ಸಮರ್ಥವಾಗಿ ಬಳಸಿದ ಸರಳ ನಿರ್ಗವಿ ಕಲಿಕಾ ಚೇತನ,ಉತ್ಸಾಹಿ, ಊರಿನ ಮೆಚ್ಚುಗೆಯ ಶಿಕ್ಷಕಿಯಾದ ಸುಚೇತಾ ಅವರಿಗೆ 2021/22ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕ ಸಂತಸದಲ್ಲಿ ಅಭಿನಂದನೆ ಸಲ್ಲಿಸಲಾಯಿತು.