ದಕ್ಷಿಣ ಕನ್ನಡ: ಇತ್ತೀಚಿಗೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ತಲ್ಲಣ ಹುಟ್ಟಿಸಿದ್ದ ಸ್ಯಾಟಲೈಟ್ ಫೋನ್ಪ್ರಕರಣ ಮತ್ತೆ ರಿಂಗಣಿಸಿದೆ. ಹೀಗಾಗಿ ಕೇಂದ್ರ ಗುಪ್ತಚರ ಎಜೆನ್ಸಿಗಳಿಂದ ರಾಜ್ಯದ ಕರಾವಳಿಯಲ್ಲಿ ಹೈ-ಅಲರ್ಟ್ ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಕೇಂದ್ರ ಬೇಹುಗಾರಿಕಾ ಸಂಸ್ಥೆಗಳು ಮಾಹಿತಿ ಕಲೆಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯ 2 ಕಡೆ, ಚಿಕ್ಕಮಗಳೂರು ಜಿಲ್ಲೆಯ 2 ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಌಕ್ಟಿವ್ ಆಗಿವೆ ಎಂದು ಮಾಹಿತಿ ನೀಡಿದೆ.
ಕೇಂದ್ರ ಬೇಹುಗಾರಿಕಾ ಸಂಸ್ಥೆಗಳ ರಾಡಾರ್ನಲ್ಲಿದ್ದ ಕರಾವಳಿ ಹಾಗು ಮಲೆನಾಡು ಭಾಗದ ಜಿಲ್ಲೆಗಳು ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್ಗಳು ಮತ್ತೆ ಌಕ್ಟಿವ್ ಆಗಿದ್ದು ಈ ಬಗ್ಗೆ ತನಿಖೆ ಚುರುಕುಗೊಂಡಿದೆ. ರಾಜ್ಯದ 5 ಕಡೆ ಸ್ಯಾಟಲೈಟ್ ಫೋನ್ ಇಂಟರ್ಸೆಪ್ಟ್ ಮಾಡಿದ್ದ ಬೇಹುಗಾರಿಕಾ ಅಧಿಕಾರಿಗಳು ನಿಗೂಢ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.