ವಿಟ್ಲ: ಶತಮಾನ ಸಂಭ್ರಮದಲ್ಲಿ ಇರುವ ಸರಸ್ವತಿ ನಿಲಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭ ಪ್ರತಿವರ್ಷದಂತೆ ನಡೆಯುವ ಶ್ರೀ ಶಾರದಾ ಪೂಜೆ ಹಾಗೂ ಸರಕಾರದಿಂದ ಅಧಿಕೃತ ಅನುಮತಿಯೊಂದಿಗೆ ಒಂದನೇ ತರಗತಿಯ ಇಂಗ್ಲಿಷ್ ಮೀಡಿಯಂ ತರಗತಿ ಉದ್ಘಾಟನೆ ಕಾರ್ಯಕ್ರಮವು ಅ.10 ರಂದು ನಡೆಯಲಿದೆ.
ಉದ್ಘಾಟನೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ರವರು ನೆರವೇರಲಿದೆ. ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಶಾಸಕರು ಉಪಸ್ಥಿತಿಯಲ್ಲಿ ಚಾಲನೆ ನೀಡಲಾಗುವುದು ಹಾಗೂ ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತರಿ ಮೂಲಕ ಶಾಲೆಯಲ್ಲಿ ಮಾಡಿದ ಎರೆಹುಳ ಗೊಬ್ಬರ ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದು ಶಾಲಾಭಿವೃದ್ಧಿ ಸಮಿತಿಯವರು, ಶಾಲಾ ದತ್ತು ಸಂಸ್ಥೆ ಮುಖ್ಯಸ್ಥರು, ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.