ಬಹು ನಿರೀಕ್ಷಿತ ಕನ್ನಡ ಚಲನಚಿತ್ರ “ಕಪೋ ಕಲ್ಪಿತಂ” ಸೆನ್ಸಾರ್ ಮುಗಿಸಿ ಬಿಡುಗಡೆಯತ್ತ ಮುಖ ಮಾಡಿದೆ, ನವ ಪ್ರತಿಭೆಗಳು ಹಾಗು ಅನುಭವಿ ಕಲಾವಿದರ ಸಂಗಮವಾದ “ಕಪೋ ಕಲ್ಪಿತಂ” ಚಿತ್ರ ಅದ್ಬುತ ನಿರೂಪಣೆ ಹಾಗು ಕಥಾ ಹಂದರ ಹೊಂದಿದ್ದು, ಖಂಡಿತ ವೀಕ್ಷಕರ ಮನಸು ಗೆಲ್ಲಲಿದೆ ಎಂದು ತಂಡ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕರಾವಳಿಯ ಪ್ರದೇಶದಲ್ಲಿ ಚಿತ್ರೀಕರಣ ಹೊಂದಿದ್ದ ಈ ಚಿತ್ರ ನಿಗೂಢ ಘಟನಾವಳಿಯ ಸತ್ಯ ಸತ್ಯತೆಯನ್ನು ಬಯಲು ಮಾಡಲು ಹೊರಡುವ ಪತ್ರಕರ್ತರಿಗೆ ಎದುರಾಗುವ ಸವಾಲುಗಳ ಸುತ್ತ ನಡೆಯುವ ರೋಚಕ ಕಥೆಯನ್ನು ಬಿಚ್ಚಿಡಲಿದೆ, ಚಿತ್ರವನ್ನು ಸುಮಿತ್ರ ಗೌಡ ನಿರ್ದೇಶನ ಮಾಡಿದ್ದು, ಈ ಮೂಲಕ ಚಂದನವನಕ್ಕೆ ಮತ್ತೊಬ್ಬ ಕ್ರಿಯೇಟಿವ್ ನಿರ್ದೇಶಕಿಯ ಆಗಮನವಾಗಿದೆ.
ಸುಮಿತ್ರ ಗೌಡ ಅವರು ನಾಯಕಿ ನಟಿಯಾಗಿಯೂ ಈ ಚಿತ್ರದಲ್ಲಿ ಮಿಂಚಿದ್ದು ಪ್ರೀತಂ ಮಕ್ಕಿಹಳ್ಳಿ ಮಜಭಾರತ ಕಲಾವಿದ ಶಿವರಾಜ್, ಸಂದೀಪ್ ಮಲಾನಿ, ಗೌರೀಶ್ ಅಕ್ಕಿ, ರಾಜೇಶ್ ಕಣ್ಣೂರ್, ಭಾಸ್ಕರ್ ಮಣಿಪಾಲ ಹೀಗೆ ಅನುಭವಿ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಗಣಿ ದೇವ್ ಕಾರ್ಕಳ ಸಂಗೀತ ನೀಡಿದ್ದು ಬಾತು ಕುಲಾಲ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಚಿತ್ರವನ್ನು ಸವ್ಯಸಾಚಿ ಕ್ರಿಯೇಷನ್ ಹಾಗೂ ಅಕ್ಷರ ಪ್ರೊಡಕ್ಷನ್ ಸಹಭಾಗಿತ್ವದಲ್ಲಿ ನಿರ್ಮಿಸಿದ್ದು ರಮೇಶ್ ಗೌಡ, ಕವಿತಾ ಕನಿಕ ಪೂಜಾರಿ, ಹಾಗು ಗಣಿ ದೇವ್ ಕಾರ್ಕಳ ನಿರ್ಮಾಣ ಮಾಡಿದ್ದಾರೆ, ಚಿತ್ರವು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿದ್ದು ಆದಷ್ಟು ಶೀಘ್ರದಲ್ಲಿ ಬೆಳ್ಳಿತೆರೆಯಲ್ಲಿ ತೆರೆಕಾಣಲಿದೆ..