ಮಂಗಳೂರು : ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಜೆಪ್ಪು ಕುಡುಪಾಡಿಯಲ್ಲಿ ನಡೆದಿದೆ.
ಜೆಪ್ಪು ಕುಡುಪಾಡಿ ನಿವಾಸಿ, ಎಸ್. ಎಸ್. ಎಲ್. ಸಿ. ವಿದ್ಯಾರ್ಥಿ ಅನಿಶ್ ಪಿ. ಪಾಯಲ್ (16) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ದಿ.ಪ್ರಶಾಂತ್ ಪಾಯಲ್ ಎಂಬವರ ಪುತ್ರ ಅನಿಶ್ ಯಾವುದೋ ಕಾರಣದಿಂದ ಮನನೊಂದು ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಶ್ ತಂದೆ ಪ್ರಶಾಂತ್ ಪಾಯಲ್ ಮೂರು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಆ ಬಳಿಕ ಅನಿಶ್ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.