ವಿಟ್ಲ: ಹಿಂದೂ ಯುವ ಸೇನೆ ವತಿಯಿಂದ ಹಾಗೂ ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ಅ. 24ರಂದು ನಡೆಯಿತು.
ಕಾರ್ಯಕ್ರಮವನ್ನು ಹಿಂದೂ ಯುವಸೇನೆ ಮಂಗಳೂರು ಕೇಂದ್ರೀಯ ಮಂಡಳಿಯ ಗೌರವಾದ್ಯಕ್ಷರಾದ ಭಾಸ್ಕರ ಚಂದ್ರ ಶೆಟ್ಟಿ ಉದ್ಘಾಟಿಸಿದರು.
ಅತಿಥಿಗಳಾಗಿ ಹಿಂದೂ ಯುವ ಸೇನೆ ಮಂಗಳೂರು ಕೇಂದ್ರೀಯ ಮಂಡಳಿಯ ಅಧ್ಯಕ್ಷರಾದ ಯಶೋಧರ ಚೌಟ, ವೆನ್ಲಾಕ್ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಅಭಿನವ್, ವೆನ್ಲಾಕ್ ಸರಕಾರಿ ಆಸ್ಪತ್ರೆಯ ರಕ್ತನಿಧಿಯ ಮುಖ್ಯಾಧಿಕಾರಿ ಆಂಟನಿ ಅಶೋಕ್, ರಕ್ತದಾನ ಶಿಬಿರದ ರೂವಾರಿ ನಿಶಾಂತ್ ಜಪ್ಪಿನಮೊಗರು, ಕಾಸರಗೋಡು ಮೈತ್ರಿ ಗುರುಕುಲಂ ವ್ಯವಸ್ಥಾಪಕರಾದ ಜಗನ್ನಾಥ್, ತುಳಸೀದಾಸ್ ಶೆಣೈ , ವಿಟ್ಲ ಹಿಂದೂ ಯುವಸೇನೆ ಗೌರವಾಧ್ಯಕ್ಷರಾದ ಹರೀಶ್ ವಿಟ್ಲ, ವಿಟ್ಲ ಹಿಂದೂ ಯುವ ಸೇನೆ ಅಧ್ಯಕ್ಷರಾದ ಜಯಪ್ರಕಾಶ್ ಉಪಸ್ಥಿತರಿದ್ದರು. ಉಮೇಶ್ ಕುಲಾಲ್ ಕಾಶಿಮಠ ನಿರೂಪಿಸಿ, ಸುರೇಶ್ ವಿಟ್ಲ ವಂದಿಸಿದರು.