ಸಾಮೆತ್ತಡ್ಕ ಯುವಕ ಮಂಡಲದ 2021-22ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವು ಜ. 31ರಂದು ನಡೆಯಿತು.. ಗೌರವಾಧ್ಯಕ್ಷರಾಗಿ ಸೂರಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಶ್ರೀನಾಥ್ ಆಚಾರ್ಯ, ಉಪಾಧ್ಯಕ್ಷರಾಗಿ ಪ್ರೀತಂ ಮಸ್ಕರೇನಸ್, ಸಂಚಾಲಕರಾಗಿ ಜಾನ್ ಪೀಟರ್ ಡಿ ಸಿಲ್ವ ಮತ್ತು ದೀಪಕ್ ಮಲ್ಯ, ಕಾರ್ಯದರ್ಶಿಯಾಗಿ ಇಂದಿವರ್ ಭಟ್, ಜೊತೆ ಕಾರ್ಯದರ್ಶಿಯಾಗಿ ಸಿರಾಜ್, ಖಜಾಂಚಿಯಾಗಿ ಕವನ್, ಕ್ರೀಡಾ ಕಾರ್ಯದರ್ಶಿಯಾಗಿ ಲೋಹಿತ್, ಸಂಘಟನಾ ಕಾರ್ಯದರ್ಶಿಯಾಗಿ ಥಾಹ ಆಯ್ಕೆಯಾದರು.ಈ ಸಂದರ್ಭದಲ್ಲಿ ಪ್ರಸನ್ನ ಕುಮಾರ್ ಶೆಟ್ಟಿ, ರೋಶನ್ ರೆಬೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.ಪ್ರೀತಂ ಮಸ್ಕರೇನಸ್ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು.