ಪುತ್ತೂರು: ಯೂತ್ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಪ್ರಕಟಗೊಂಡಿದ್ದು ಅದರಂತೆ ಅಧ್ಯಕ್ಷರಾಗಿ ಶ್ರೀಪ್ರಸಾಧ್ ಎಸ್ ಎನ್(372 ಮತ),ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೆಮ್ಮಾರ (224 ಮತ)ಹಾಗೂ ಅಭಿಷೇಕ್ ಬೆಳ್ಳಿಪ್ಪಾಡಿ(34 ಮತ),ಪ್ರಧಾನ ಕಾರ್ಯದರ್ಶಿಗಳಾಗಿ ಸನಧ್(147 ಮತ)ಹಾಗೂ ರಿಯಾಝ್ ಕೆ (96 ಮತ)ರವರು ಆಯ್ಕೆಯಾಗಿದ್ದಾರೆ.
34 ಮತ ಪಡೆದ ಅಭಿಷೇಕ್ ಬೆಳ್ಳಿಪ್ಪಾಡಿ ಯೂತ್ ಕಾಂಗ್ರೆಸ್ ಪುತ್ತೂರಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ.ಅವರು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದು ಯೂತ್ ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಆದ ಕೆಲ ಗೊಂದಲ ಹಾಗು ತಾಂತ್ರಿಕ ಸಮಸ್ಯೆಯಿಂದಾಗಿ ತನ್ನ ನಾಮಪತ್ರವು ಪುತ್ತೂರು ಬ್ಲಾಕ್ ಗೆ ಸಲ್ಲಿಕೆಯಾಗಿತ್ತು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಿದ್ದಿಕ್ ಅವಿರೋಧವಾಗಿ ಆಯ್ಕೆಯಾದರು.ಚುನಾವಣೆಯ ಮೊದಲೇ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಪತ್ರಿಕಾ ಪ್ರಕಟಣೆಯನ್ನು ನೀಡಿರುವುದಾಗಿ ಆದರೂ ನನಗೆ 34 ಮತಗಳು ಲಭಿಸಿದ್ದು ಆಶ್ಚರ್ಯಕರವಾಗಿದೆ,ಇದು ನಾನು ಸ್ಪರ್ಧಿಸದೆ ಪಡೆದ ಮತಗಳಾಗಿದ್ದು ಖಂಡಿತವಾಗಿಯೂ ನಾನು ಕೊನೆಯ ಸ್ಥಾನ ಪಡೆಯುವಂತಹ ದುರ್ಬಲ ನಾಯಕತ್ವದವನಲ್ಲ…ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವುದರ ಜೊತೆಗೆ ನನ್ನ ತಂದೆಯವರಾದ ಡಾ| ಬಿ ರಘು ಹಾಗು ಅವರ ರಾಜಕೀಯ ಗುರುಗಳಾದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ರಮಾನಾಥ ರೈ ಅವರ ಆಶಿರ್ವಾದ ದೊಂದಿಗೆ ಅವರ ಮಾರ್ಗದರ್ಶನದಲ್ಲಿ ಮುಂದಿನ ರಾಜಕೀಯ ಜೀವನ ಮುಂದುವರಿಸುತ್ತೇನೆ ಎಂದು ಅಭಿಷೇಕ್ ಬೆಳ್ಳಿಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.