ಪುತ್ತೂರು: ಯುವ ಮತ್ತು ಜನ್ಮ ಫೌಂಡೇಷನ್ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಹಾಗೂ ವರ್ತಕರ ಸಂಘ ಕುಂಬ್ರ ಇದರ ಸಹಯೋಗದೊಂದಿಗೆ ಕುಂಬ್ರದ ಹರ್ಷ ಬಿಲ್ಡಿಂಗ್‌ನಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಆರೋಗ್ಯ ಪ್ರತಿಯೊಬ್ಬರ ಸಂಪತ್ತು ಆಗಬೇಕು, ಆರೋಗ್ಯವಂತ ವ್ಯಕ್ತಿಯಾಗಿ ಬದುಕುವುದಕ್ಕಿಂತ ದೊಡ್ಡ ಬದುಕು ಬೇರೊಂದಿಲ್ಲ, ದೇಹದ ಆರೋಗ್ಯ ಎಷ್ಟು ಮುಖ್ಯವೋ ದಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡ ಅಷ್ಟೇ ಮುಖ್ಯ ಎಂದು ರೋಟರಿ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಜಗಜೀವನ್‌ದಾಸ್ ರೈ ಹೇಳಿದರು.
ಅವರು ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಜನ್ಮ ಫೌಂಡೇಷನ್ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಹಾಗೂ ವರ್ತಕರ ಸಂಘ ಕುಂಬ್ರ ಇದರ ಸಹಯೋಗದೊಂದಿಗೆ ಕುಂಬ್ರದ ಹರ್ಷ ಬಿಲ್ಡಿಂಗ್‌ನಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ರೋಟರಿ ವಲಯ ಸೇನಾನಿ ಉಮೇಶ್ ನಾಯಕ್ ಮಾತನಾಡಿ, ದಂತ ಆರೋಗ್ಯದ ಬಗ್ಗೆ ಪ್ರತಿಯೊಬ್ಬರ ಕಾಳಜಿ ವಹಿಸಬೇಕು, ದಂತ ಮುಖ್ಯದ ಸೌಂದರ್ಯಕ್ಕಷ್ಟೇ ಸೀಮಿತವಲ್ಲ, ದೇಹದ ಆರೋಗ್ಯದ ಬಗ್ಗೆಯೂ ದಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರೋಫೆಸರ್ ಡಾ.ಹೇಮಂತ್ ದಂತ ಆರೋಗ್ಯದ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ರೋಟರಿ ಯುವ ನಿಯೋಜಿತ ಅಧ್ಯಕ್ಷ ರಾಜೇಶ್ವರಿ ಆಚಾರ್ಯ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಭರತ್ ಪೈ ಸ್ವಾಗತಿಸಿದರು. ರೋಟರಿ ಯುವದ ಸ್ಥಾಪಕ ಅಧ್ಯಕ್ಷ ಪಶುಪತಿ ಶರ್ಮ ವಂದಿಸಿದರು. ರೋಟರಿ ಯುವದ ಸ್ಥಾಪಕ ಅಧ್ಯಕ್ಷ ರತ್ನಾಕರ ರೈ ಕೆದಂಬಾಡಿಗುತ್ತು ಕಾರ್ಯಕ್ರಮ ನಿರೂಪಿಸಿದರು.
ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆಯಿತು. ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಇತ್ಯಾದಿ ಚಿಕಿತ್ಸೆಗಳು ನಡೆಯಿತು. ಕುಂಬ್ರ ಆಸುಪಾಸಿನ ಸುಮಾರು 70 ಕ್ಕೂ ಅಧಿಕ ಮಂದಿ ದಂತ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಕೆ.ವಿ.ಜಿ ದಂತ ಮಹಾವಿದ್ಯಾಲಯದ ತಂಡ ಚಿಕಿತ್ಸಾ ಶಿಬಿರ ನಡೆಸಿಕೊಟ್ಟರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ದೇಹದಾನಕ್ಕೆ ಹೆಸರು ನೋಂದಾಯಿಸಿದ ಕಡಮಜಲು ಸುಭಾಷ್ ರೈಯವರಿಗೆ ಈ ಸಂದರ್ಭದಲ್ಲಿ ರೋಟರಿ ಯುವ ಹಾಗೂ ಜನ್ಮ ಫೌಂಡೇಷನ್ ಟ್ರಸ್ಟ್‌ನಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಫಲಪುಷ್ಪ, ಶಾಲು,ಸ್ಮರಣಿಕೆ, ಪೇಟಾ ತೊಡಿಸಿ ಸನ್ಮಾನಿಸಲಾಯಿತು. ಜನ್ಮ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಹರ್ಷ ಕುಮಾರ್ ರೈ ಮಾಡಾವು ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯಕ್ರಮಕ್ಕೆ ಸಹಕರಿಸಿದ್ದ ಅಶ್ರಫ್ ಸನ್‌ಶೈನ್ ರವರನ್ನು ಈ ಸಂದರ್ಭದಲ್ಲಿ ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು.