ಸಂಕೇಶ್ ಪ್ರೊಡಕ್ಷನ್ ಅರ್ಪಿಸುವ , ನವೀನ್ ಸಂಕೇಶ್ ಸುಳ್ಯ ನಿರ್ಮಾಣದ ‘ಕಾಡಗುಡ್ಡೆಡ್ ಕಲ್ಲ್’ ಎಂಬ ಹೆಸರಿನಲ್ಲಿ ಕಲಿಯುಗದ ಕಾರಣಿಕ ದೈವ ಸ್ವಾಮಿ ಕೊರಗಜ್ಜನ ತುಳು ಭಕ್ತಿಗೀತೆ ಇಂದು ‘ಎಸ್.ಬಿ.ಎಂ ಕ್ರಿಯೇಷನ್ಸ್’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಗೀತೆ ಬಿಡುಗಡೆ ಕಾರ್ಯಕ್ರಮವು ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಗರಡಿ ಮತ್ತು ಸ್ವಾಮಿ ಕೊರಗಜ್ಜ ಸನ್ನಿದಿ ಕೊರಂಬಡ್ಕ , ಜಯನಗರ ಸುಳ್ಯದಲ್ಲಿ ನಡೆಯಿತು.
ಈ ಗೀತೆಯ ಸಾಹಿತ್ಯ ರಚನೆ ಮತ್ತು ನಿರ್ದೇಶನ ಗಡಿನಾಡ ಕಲಾವಿದ ಚಿದಾನಂದ ಪರಪ್ಪ ಮಾಡಿದ್ದು , ಹೃಥ್ವಿಕ ಪ್ರವೀಣ್ ಭಟ್ ಹಾಗೂ ಸಾಹಿತ್ಯ ಪುರುಷೋತ್ತಮ್ ರಾವ್ ತಮ್ಮ ಕಂಠದಾನ ಮಾಡಿದ್ದಾರೆ.
ಧ್ವನಿ ಮುದ್ರಣ ಸವಿಸಂಗೀತ ಸ್ಟುಡಿಯೋ ಪುತ್ತೂರು ಹಾಗೂ ಚಿತ್ರಿಕರಣ ನವೀನ್. ಎಂ ಮಾಡಿದ್ದು ,ದೇವಿಪ್ರಸಾದ್ ರಾವ್ ಈಶ್ವರಮಂಗಲ ಸಂಕಲನದಿಂದ ಗೀತೆ ಅದ್ಭುತವಾಗಿ ಮೂಡಿ ಬಂದಿದೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ತುಳುನಾಡ ಜಾನಪದ ಮಾಣಿಕ್ಯ ಗುರುಚರಣ್ ಪೊಲಿಪು ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ರವಿ ರಾಮಕುಂಜ, ಕುಸುಮ್ಯ ಕಾರ್ಕಳ ಹಾಗೂ ಪ್ರಸಿದ್ಧ ದೈವ ನರ್ತಕರಾದ ಜಯರಾಮ್ ಬೊಳಿಯಮಜಲು ಸುಳ್ಯ , ಪ್ರಸಿದ್ಧ ವಿಷ್ಣುಮೂರ್ತಿ ದೈವ ನರ್ತಕ ರಾಜೇಶ್ ಪನಿಕ್ಕರ್ ಮೇನಾಳ ಹಾಗೂ ಹೆಸರಾಂತ ಕಲಾವಿದರು ಶುಭಹಾರೈಸಿದರು.
ತುಳುವ ಜೋಕುಲು, ತುಳುನಾಡ ಮ್ಯೂಸಿಕ್ ವರ್ಲ್ಡ್, ದುರ್ಗಾ ಮ್ಯೂಸಿಕಲ್ಸ್, ವಸಂತ ಗುರಿಯಡ್ಕ ಮರ್ದಲಾ, ಬಾಸ್ ಮೀಡಿಯಾ ಕನ್ನಡ ಗೀತೆಗೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ.