ಮಂಗಳೂರು: ಪೂಜೆಯ ಸಂದರ್ಭ ಕಲಶಕ್ಕೆ ಇಟ್ಟ ಚಿನ್ನದ ಕರಿಮಣಿ ಸರವನ್ನು ವಾಪಸ್ ನೀಡದೆ ಜ್ಯೋತಿಷಿಯೋರ್ವ ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯು ಅ.13 ರಂದು ಕುಂಜತ್ತಬೈಲ್‌ನಲ್ಲಿರುವ ಜ್ಯೋತಿಷಿ ವಿನೋದ ಪೂಜಾರಿ ಬಳಿ ಹೋಗಿದ್ದರು. ಈ ವೇಳೆ ಜ್ಯೋತಿಷಿಯು ‘ನಿಮಗೆ ತುಂಬಾ ದೋಷವಿದೆ.ಆ ದೋಷವನ್ನು ಕಳೆಯುವುದಕ್ಕಾಗಿ ಪೂಜೆ ಮಾಡಿಸಿಕೊಡುತ್ತೇನೆ. ಪೂಜೆಯ ಸಮಯ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು’ ಎಂದು ವಿನೋದ ಪೂಜಾರಿ ಹೇಳಿದ್ದ. ಅದರಂತೆ ಮಹಿಳೆಯು 5.5 ಪವನ್ ತೂಕದ ಚಿನ್ನದ ಕರಿಮಣಿಸರವನ್ನು ಪೂಜೆಗೆಂದು ನೀಡಿದ್ದರು.
ವಿನೋದ್ ಪೂಜಾರಿ ಈ ಸರವನ್ನಿಟ್ಟು 15 ದಿನಗಳ ಕಾಲ ಪೂಜೆ ಮಾಡಿ ವಾಪಸ್ ನೀಡುವುದಾಗಿ ತಿಳಿಸಿದ್ದ. ಆದರೆ ಆನಂತರವೂ ನೀಡದೆ ವಂಚಿಸಿ ತಲೆಮರೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.