ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಸತಿ ನಿಲಯದ ಆಡಳಿತ ಸಮಿತಿ ಮತ್ತು ಕಾಲೇಜಿನ ಉಪನ್ಯಾಸಕರ ಜೊತೆ ಸಮಾಲೋಚನಾ ಸಭೆಯು ನಡೆಯಿತು. ವಸತಿ ನಿಲಯದ ಕಾರ್ಯದರ್ಶಿ ಅಚ್ಯುತ ನಾಯಕ್ ಮಾತನಾಡಿ ಆಪ್ತಸಮಾಲೋಚನೆಯ ಮೂಲಕ ಸ್ನೇಹ ಸಂಬಂಧ ಬೆಳೆಸಿ ಮನೆಯ ವಾತಾವರಣ ಮೂಡಿಸಿದಾಗ ಮಕ್ಕಳು ಪ್ರೇರೇಪಿತರಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ರಾಜ್ಯದ ವಿವಿಧಡೆಯಿಂದ ವಸತಿ ನಿಲಯದಲ್ಲಿ ನೆಲೆಸಿರುವ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಲು ವಿವೇಕಾನಂದ ವಿದ್ಯಾ ಸಂಸ್ಥೆಯ ವಸತಿ ನಿಲಯವು ಕಾಯೋನ್ಮುಖವಾಗಿದೆ ಎಂದರು.ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ವಿವೇಕಾನಂದ ವಸತಿ ನಿಲಯಗಳ ಅಧ್ಯಕ್ಷ ಶಿವಣ್ಣ ಗೌಡ, ಮುಖ್ಯ ನಿಲಯ ಪಾಲಕರಾದ ಗೋವಿಂದರಾಜ್ ಶರ್ಮ, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಸ್ತಾವನೆಗೈದರು. ವಸತಿ ನಿಲಯದ ಪಾಲಕರಾದ ರೂಪೇಶ್ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ್ ನಾಯ್ಕ ವಂದಿಸಿದರು.