ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಜ ರಾಧಾಕೃಷ್ಣ ಆಳ್ವ ರವರು, ವಿಟ್ಲ ಪಂಚಾಯತ್ ನ 18 ವಾರ್ಡ್ ಗಳ ಅಭ್ಯರ್ಥಿಗಳು ಈಗಾಗಲೇ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮನೆ ಮನೆ ಭೇಟಿಯಾಗಿ ಮತದಾರ ರನ್ನು ಭೇಟಿ ಮಾಡುವಂತಹ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಈ ಐದು ವರ್ಷದಲ್ಲಿ ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ್ ಭ್ರಷ್ಟಚಾರ ರಹಿತ ಉತ್ತಮ ಆಡಳಿತವನ್ನು ನೀಡಿದೆ ಎಂದರು.
ಗ್ರಾಮ ಪಂಚಾಯತ್ ನಿಂದ ಪಟ್ಟಣ ಆದ ಸಂದರ್ಭದಲ್ಲಿ ಅನೇಕ ಕೆಲಸ ಕಾರ್ಯಗಳು ಆಗಬೇಕಿತ್ತು, ಸ್ವಚ್ಚತೆಗೆ ಸಂಬಂಧ ಪಟ್ಟ ಹಾಗೇ, ಕುಡಿಯುವ ನೀರಿಗೆ ಸಂಬಂಧ ಪಟ್ಟ ಹಾಗೇ, ರಸ್ತೆ, ಬೀದಿ ದೀಪಗಳಿಗೆ ಸಂಬಂಧ ಪಟ್ಟ ಹಾಗೇ ಒಳ್ಳೆಯ ರೀತಿಯ ಕೆಲಸ ಕಾರ್ಯವನ್ನು ಬಿಜೆಪಿ ಪಟ್ಟಣ ಪಂಚಾಯತ್ ಸದಸ್ಯರು ಮಾಡಿದ್ದಾರೆ.ಇನ್ನಷ್ಟು ಕೆಲಸಗಳು ಪಟ್ಟಣ ಪಂಚಾಯತ್ ಆದ ನಂತರ ನಡೆಯಬೇಕಿದೆ ಆ ದೃಷ್ಟಿಯಲ್ಲಿ ಈ ಸಲದ ನಮ್ಮ 18 ಅಭ್ಯರ್ಥಿಗಳು ಕೂಡ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪಟ್ಟಣ ಪಂಚಾಯತ್ ಅಭ್ಯರ್ಥಿಗಳಲ್ಲಿ ಮೂರು ಜನ ಹಿಂದಿನ ಪಟ್ಟಣ ಪಂಚಾಯತ್ ಸದಸ್ಯರಾದವರು ಅಭ್ಯರ್ಥಿಗಳಾಗಿದ್ದಾರೆ.15 ಜನ ಹೊಸ ಮುಖಗಳು ಅಭ್ಯರ್ಥಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಮನೆ ಮತದಾರ ರನ್ನು ಭೇಟಿ ಮಾಡಿ ಅವರ ವಿಶ್ವಾಸ ಗಳಿಸುವಲ್ಲಿ ಕೆಲಸ ಕಾರ್ಯಗಳನ್ನ ಕಾರ್ಯಕರ್ತರ ಜೊತೆ ಸೇರಿ ಮಾಡುತ್ತಿದ್ದಾರೆ. 18 ರಲ್ಲಿ 18 ವಾರ್ಡ್ ಗಳಲ್ಲೂ ಗೆಲುವು ಸಾಧಿಸಬೇಕೆಂಬುದು ನಮ್ಮ ನಿರೀಕ್ಷೆ. 18 ರಲ್ಲಿ 15 ವಾರ್ಡ್ ನಿಶ್ಚಿತ ಗೆಲವು ಆಗುತ್ತದೆ ಎಂಬ ಭರವಸೆಯಿದೆ ಎಂದರು.
ಮುಂದಿನ ಪಟ್ಟಣ ಪಂಚಾಯತ್ ಹೇಗಿರಬೇಕು ಎಂಬ ಬಗ್ಗೆ ವಿಟ್ಲ ಪಟ್ಟಣ ನಾಗರಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಾಣಾಳಿಕೆಯನ್ನು ಸಿದ್ಧಗೊಳಿಸಿದ್ದೇವೆ. ಪ್ರಾಣಾಳಿಕೆಯಲ್ಲಿ ಒಳಚರಂಡಿ ವ್ಯವಸ್ಥೆಯ ಬಗ್ಗೆ, ಪಟ್ಟಣ ವ್ಯಾಪ್ತಿಯಲ್ಲಿ ಜನ ಸಂದಣಿ ಮತ್ತು ವಾಹನ ಸಂದಣಿ ಜಾಸ್ತಿಯಾಗುವುದಕ್ಕೆ ರಿಂಗ್ ರೋಡ್ ವ್ಯವಸ್ಥೆ, 24*7 ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ ಮೇಲ್ದರ್ಜೆಗೆರಿಸುವಂತಹ ವ್ಯವಸ್ಥೆ, ಉದ್ಯಾನವನ, ಸಮುದಾಯ ಭವನ, ಈಜು ಕೊಳಗಳ ನಿರ್ಮಾಣಗಳ ಬಗ್ಗೆ ಜನರ ಅಭಿಪ್ರಾಯಪಟ್ಟಿದ್ದು, ಈ ನಿಟ್ಟಿನಲ್ಲಿ ಅದನ್ನೆಲ್ಲ ನಾವು ಪ್ರಣಾಳಿಕೆಯಲ್ಲಿ ಸೇರಿಸಿದ್ದು, ಮುಂದಿನ ಅವಧಿಯಲ್ಲಿ ಬಿಜೆಪಿಯ ಪಟ್ಟಣ ಪಂಚಾಯತ್ ನ ಆಡಳಿತ ಬಂದಾಗ ಈ ಕೆಲಸ ಕಾರ್ಯಗಳನ್ನೆಲ್ಲ ಜಾರಿಗೆ ತರುತ್ತೇವೆ ಎಂದರು.
ಕಳೆದ ಬಾರಿ 12 ಸ್ಥಾನಗಳನ್ನು ಗೆದ್ದು ಒಳ್ಳೆಯ ಆಡಳಿತವನ್ನು ನೀಡಿದ್ದೇವೆ. ಭ್ರಷ್ಟಾಚಾರ ರಹಿತವಾದ ಅಭಿವೃದ್ಧಿ ಪರವಾದ ಆಡಳಿತವನ್ನು ನೀಡಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮತ್ತು ಎಸ್ ಡಿಪಿಐ ಯಿಂದ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಚುನಾವಣೆಯಲ್ಲಿ ಅಭೂತಪೂರ್ವವಾದಂತಹ ಜಯವನ್ನು ಭಾರತೀಯ ಜನತಾ ಪಾರ್ಟಿ ಗಳಿಸುತ್ತದೆ ಎಂದರು.