ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕಲಾಸಿಪಾಳ್ಯ ಗಲ್ಲಿಯಲ್ಲಿನ ಎಟಿಎಂ ಮೆಷಿನ್ ನಲ್ಲಿ ಹಣವಿದ್ದರೆ ಕರೆಂಟಿಲ್ಲ..ಕರೆಂಟಿದ್ರೆ ಹಣವಿಲ್ಲ..ಎರಡೂ ಇದ್ರೆ ಸರ್ವರ್ ಪ್ರಾಬ್ಲಂ ಎಂಬ ಅವ್ಯವಸ್ಥೆಯಿದ್ದು, ಎಟಿಎಂ ಇದ್ರೂ ಏನು ಪ್ರಯೋಜನ ಇಲ್ಲದಂತಾಗಿದೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರು ತುರ್ತು ಸಂದರ್ಭದಲ್ಲಿ ಬ್ಯಾಂಕ್ ಹೋಗಿ ಹಣ ತೆಗೆಯುವ ಬದಲು ಎಟಿಎಂ ನಿಂದ ತಕ್ಷಣ ಹಣ ಡ್ರಾ ಮಾಡಬಹುದು ಎಂದು ಸಮೀಪ ಎಟಿಎಂ ಗಳನ್ನು ನಂಬಿದರೇ ಅದು ಈ ರೀತಿಯಾಗಿ ಕ್ಷಣಕ್ಕೊಮ್ಮೆ ಕೈ ಕೊಟ್ರೆ ತುರ್ತು ಸಂದರ್ಭದಲ್ಲಿ ಏನು ಮಾಡಬೇಕು..??, ಕರೆಂಟ್ ಹೋದ್ರೆ ಎಟಿಎಂ ಆಫ್ ಆಗುತ್ತದೆ. ಇಂತಹ ಅವ್ಯವಸ್ಥೆ ಇರುವ ಎಟಿಎಂ ಅನ್ನು ಆದಷ್ಟು ಬೇಗ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೇಶದಾದ್ಯಂತ ಶಾಖೆಗಳನ್ನ ಹೊಂದಿರುವ ಆಕ್ಸಿಸ್ ಬ್ಯಾಂಕಿಗೂ ಇಂಥಾ ದುರ್ಗತಿ ಬಂತೇ.? ವಿದ್ಯುತ್ ಹೋದಾಗ ಬದಲಿ ಪವರ್ ವ್ಯವಸ್ಥೆ ಕಲ್ಪಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾದುದು ಬ್ಯಾಂಕಿನ ಜವಾಬ್ದಾರಿಯಲ್ಲವೇ.? ಇನ್ನಾದರೂ ಇಲ್ಲಿನ ಎಟಿಯಂ ಅವ್ಯವಸ್ಥೆ ಸರಿಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬ್ಯಾಂಕ್ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.