ಪುತ್ತೂರು: ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗೌರವಾಧ್ಯಕ್ಷತನದಲ್ಲಿ, ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ
ಜ.15 ಹಾಗೂ 16 ರಂದು 29ನೇ ವರ್ಷದ ಕಂಬಳ ಕೂಟ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೇ ಸರ್ಕಾರ ಒಮಿಕ್ರಾನ್ ಕೋವಿಡ್ ನಿಯಮವಳಿಗಳಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಪುತ್ತೂರು ಕಂಬಳಕ್ಕೆ ಈ ಸಲ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ನಟ ಶಿವರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ನಿಗಧಿಯಾಗಿದ್ದು, ಸಮಯವಕಾಶ ಕೊರತೆಯಿಂದ ಹಾಗೂ ಸರ್ಕಾರದ ನಿಯಮವಳಿಗಳಿಂದಾಗಿ ಮುಂದೂಡಲಾಗಿದೆ.
ಫೆ.13 ಆದಿತ್ಯವಾರ ಹಾಗೂ 14 ಸೋಮವಾರ ಈ ಸಲದ ಕಂಬಳ ಕೂಟ ನಡೆಯಲಿದೆ.
ಪುತ್ತೂರು ದೇವರಮಾರು ಗದ್ದೆಯಲ್ಲಿ ಸಭೆ ಸೇರಿದ ಕಂಬಳ ಸಮಿತಿಯವರು ಹೊಸ ದಿನಾಂಕದಂದು ನಡೆಸುವುದೆಂದು ತೀರ್ಮಾನಿಸಿದರು.